ಬೆಂಗಳೂ: ಓಲಾ, ಊಬರ್ ಮಾದರಿಯಲ್ಲಿಯೇ ಮತ್ತೊಂದು ಹೊಸ ಆಪ್ ಅಭಿವೃದ್ಧಿ ಪಡಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಓಲಾ, ಊಬರ್ ನಂತಹ ಖಾಸಗಿ ಕ್ಯಾಬ್ ಸೇವೆ ಮಾದರಿಯಲ್ಲಿಯೇ ಆಟೋ ಮತ್ತು ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಷನ್ ಆರಂಭಿಸುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಆಟೊ ಹಾಗೂ ಕ್ಯಾಬ್ ಚಾಲಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಚರ್ಚೆ ನಡೆದಿದೆ. ಚಾಲಕರೊಂದಿಗಿನ ಸಭೆಯಲ್ಲಿಯೂ ಖಾಸಗಿ ಸಾರಿಗೆ ಒಕ್ಕೂಟಗಳು ತಮಗೆ ಭಾರಿ ಕಮಿಷನ್ ವಿಧಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ಸರ್ಕಾರದಿಂದಲೇ ಹೊಸ ಆಪ್ ತಯಾರಿಸಿ ಚಾಲಕರಿಗೆ ನೀಡಿ ಅನುವು ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಈಗಾಗಲೇ ಆಟೋ ಹಾಗೂ ಕ್ಯಾಬ್ ಗಳಿಗಾಗಿ ಹೊಸ ಆಪ್ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಖಾಸಗಿ ಕ್ಯಾಬ್ ಬುಕ್ಕಿಂಗ್ ಮಾದರಿಯಲ್ಲಿಯೇ ಅಪ್ಲಿಕೇಷನ್ ನ್ನು ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಆಟೋ ಸ್ಟ್ಯಾಂಡ್ ಸ್ಥಾಪಿಸುವ ಬಗ್ಗೆಯೂ ಬಿಎಂಆರ್ ಸಿಎಲ್ ಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಓಲಾ, ಊಬರ್ ಮಾದರಿಯಲ್ಲಿ ಸರ್ಕಾರದಿಂದಲೇ ಹೊಸ ಆಟೋ, ಟ್ಯಾಕ್ಸಿ ಸೇವೆ ಆರಂಭವಾಗಲಿದೆ.