ಬೆಂಗಳೂರು : ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ನಮಗೆ ಪಾಠ ಕಲಿಸಿದೆ. ಹಾಗಾಗಿ ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಕನಿಷ್ಠ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಮಾಡಲು ಚಿಂತನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಅನೇಕಲ್ ಜಿಲ್ಲೆಯ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದಲ್ಲಿ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆ
ಕರ್ನಾಟಕ-ತಮಿಳುನಾಡು ಗಡಿಯ ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಶ್ರೀ ಬಾಲಾಜಿ ಟ್ರೇಡರ್ಸ್ ಕಳೆದ ಒಂದು ವಾರದಲ್ಲಿ ಹಲವಾರು ಜನರನ್ನು ಮಾರಾಟಗಾರರಾಗಿ ನೇಮಿಸಿಕೊಂಡಿತ್ತು. ಪಟಾಕಿಗಳನ್ನು ಹೊತ್ತ ಲಾರಿಯೊಂದು ಬಾಲಾಜಿ ಟ್ರೇಡರ್ಸ್ ಅಂಗಡಿಗೆ ಬಂದಿತು. ಅಂಗಡಿಯ ಮಾಲೀಕರು ಸರಕುಗಳನ್ನು ಇಳಿಸಲು ಮತ್ತು ಅವುಗಳನ್ನು ಗೋದಾಮಿನಲ್ಲಿ ಇಡಲು ಕಾರ್ಮಿಕರಿಗೆ ಸೂಚನೆ ನೀಡಿದರು.
ಸುಮಾರು 10 ಜನರು ಪಟಾಕಿಗಳನ್ನು ಹೊಂದಿರುವ ಪೆಟ್ಟಿಗೆಗಳನ್ನು ಇಳಿಸಲು ಪ್ರಾರಂಭಿಸಿದರು. ಎರಡನೇ ಬ್ಯಾಚ್ ಕಾರ್ಮಿಕರು ಪೆಟ್ಟಿಗೆಗಳನ್ನು ಇಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕಿಡಿ ಕಾಣಿಸಿಕೊಂಡಿತು ಮತ್ತು ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಗೋದಾಮಿನ ಪ್ರವೇಶದ್ವಾರದಲ್ಲಿದ್ದ ಹಲವಾರು ಜನರು ಹೊರಗೆ ಓಡಿಹೋದರು, ಆದರೆ ಗೋದಾಮಿನೊಳಗಿದ್ದ ಜನರು ಬೆಂಕಿಯು ಬೇಗನೆ ಹರಡಿದ್ದರಿಂದ ಸಿಕ್ಕಿಬಿದ್ದರು, ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿತು, ಅವರಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಈ ದುರಂತದಲ್ಲಿ ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ. ಪಟಾಕಿ ಕೊಳ್ಳಲು ಬಂದವರು ಹಾಗೂ ಕಾರ್ಮಿಕರು ಸೇರಿ 17 ಮಂದಿ ಮೃತಪಟ್ಟಿದ್ದಾರೆ.