ಸರ್ಕಾರದ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆಯೊಂದು ಜನತೆಗೆ ʼವರ್ಕ್ ಫ್ರಮ್ ಹೋಮ್ʼ ಅವಕಾಶ ನೀಡುತ್ತಿದೆ ಎಂಬ ಸುದ್ದಿಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಪಿಐಬಿ ಫ್ಯಾಕ್ಟ್ ಚೆಕ್ನಲ್ಲಿ ಇದು ಸುಳ್ಳು ಸುದ್ದಿ ಎಂಬ ವಿಚಾರ ಬಟಾಬಯಲಾಗಿದೆ.
ವಾಟ್ಸಾಪ್ಗಳಲ್ಲಿ ಹರಿದಾಡುತ್ತಿದ್ದ ಮೆಸೇಜ್ನಲ್ಲಿ ಸರ್ಕಾರದ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆಯು ದೇಶದ ಜನತೆಗೆ ವರ್ಕ್ ಫ್ರಮ್ ಹೋಂ ಅವಕಾಶ ನೀಡುತ್ತಿದೆ ಎಂದು ಹೇಳಿತ್ತು.
ಆದರೆ ಸರ್ಕಾರವು ಈ ರೀತಿಯ ಯಾವುದೇ ಘೋಷಣೆ ಮಾಡಿಲ್ಲ ಹೀಗಾಗಿ ಇಂತಹ ನಕಲಿ ಮೆಸೇಜ್ಗಳನ್ನು ನಂಬಬೇಡಿ ಎಂದು ಪಿಐಬಿ ಹೇಳಿದೆ.
ಕೊರೊನಾ ಸಾಂಕ್ರಾಮಿಕದ ಬಳಿಕ ಸಾಕಷ್ಟು ಜನರು ವರ್ಕ್ ಫ್ರಮ್ ಹೋಮ್ನಲ್ಲೇ ಇದ್ದಾರೆ. ಹೀಗಾಗಿ ಈ ರೀತಿಯ ನಕಲಿ ಸುದ್ದಿಗೆ ಇನ್ನಷ್ಟು ಹೆಚ್ಚಿನ ಪುಷ್ಠಿ ಸಿಕ್ಕಂತಾಗಿದೆ.