alex Certify ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ಸೇವಾ ವಹಿಯನ್ನು ‘ESR’ ನಲ್ಲೇ ಅನುಷ್ಟಾನಗೊಳಿಸಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ಸೇವಾ ವಹಿಯನ್ನು ‘ESR’ ನಲ್ಲೇ ಅನುಷ್ಟಾನಗೊಳಿಸಲು ಸೂಚನೆ

ಬೆಂಗಳೂರು : ಸರ್ಕಾರಿ ನೌಕರರ ಸೇವಾ ವಹಿಯನ್ನು ನಲ್ಲೇ ಅನುಷ್ಟಾನಗೊಳಿಸಲು ಸರ್ಕಾರ ಸೂಚನೆ ನೀಡಿದೆ. 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ” (Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧ ಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ.

ಹಾಗೂ ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ ಹಾಗೂ ಹೆಚ್ಆರ್ಎಂಎಸ್-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು ಹೆಚ್ಆರ್ಎಂಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ ಹೆಚ್ಆರ್ಎಂಎಸ್-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿದೆ.

ಆದುದರಿಂದ, ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಹೆಚ್ಚಿನ ಗಮನ ಹರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸುವಂತೆ ಹಾಗೂ ಸಿಬ್ಬಂದಿಗಳ ಇಎಸ್ಆರ್ ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾಗಿದ್ದಲ್ಲಿ ಕೂಡಲೇ ಹೆಚ್ಆರ್ಎಂಎಸ್ ತಂಡವನ್ನು ಸಂಪರ್ಕಿಸಿ ಸರಿಪಡಿಸಿಕೊಂಡು ಸದರಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು.

ಆದಾಗ್ಯೂ ಇಎಸ್‌ಆ‌ರ್ ಅನುಷ್ಠಾನದಲ್ಲಿ ಯಾವುದೇ ಪ್ರಗತಿಯನ್ನು ಕಂಡು ಬಂದಿರುವುದಿಲ್ಲ. ಇದೇ ರೀತಿ ಮುಂದುವರೆದಲ್ಲಿ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿರುವ ಹೆಚ್‌ಆರ್‌ಎಂಎಸ್-2ನಲ್ಲಿ ವೇತನ ಪಡೆಯುವುದು ಕಷ್ಟಕರವಾಗುತ್ತದೆ. ಸೇವಾವಹಿಯು ಸರ್ಕಾರಿ ನೌಕರರ ಒಂದು ಪ್ರಮುಖ ಭಾಗವಾಗಿದ್ದು, ಹೆಚ್‌ಆರ್‌ಎಂಎಸ್ -2 ಅನುಷ್ಠಾನಗೊಳ್ಳಲು ವಿದ್ಯುನ್ಮಾನ ಸೇವಾ ವಹಿ (ಇಎಸ್‌ಆರ್) ಪೂರ್ಣಗೊಳ್ಳುವುದು ಮುಖ್ಯವಾಗಿರುತ್ತದೆ. ಆದುದರಿಂದ ವಿಶೇಷ ಅಭಿಯಾನದ ರೂಪದಲ್ಲಿ ಹೆಚ್ಚಿನ ಒತ್ತು ಕೊಟ್ಟು ಮಾರ್ಚ್ ಅಂತ್ಯದೊಳಗಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸುವ (ESR) ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...