ಬೆಂಗಳೂರು: ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣಾ ಮೊತ್ತವನ್ನು ಸರ್ಕಾರ ಹೆಚ್ಚಳ ಮಾಡಿದೆ.
ಪ್ರಸಕ್ತ ಸಾಲಿಗೆ ಶಾಲೆಗಳ ನಿರ್ವಹಣೆಗೆ 120 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಶಾಲೆಗಳ ನಿರ್ವಹಣೆಗೆ 5000 ರೂ., 10000 ರೂ. ನೀಡುತ್ತಿದ್ದ ನಿರ್ವಹಣೆ ಮೊತ್ತವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ.
50 ಮಕ್ಕಳು ಇರುವ ಶಾಲೆಗೆ ವಾರ್ಷಿಕ 20,000 ರೂ., 50 ರಿಂದ 100 ಮಕ್ಕಳಿರುವ ಶಾಲೆಗೆ 28,000 ರೂ., 100 ರಿಂದ 500 ಮಕ್ಕಳಿರುವ ಶಾಲೆಗೆ 33 ಸಾವಿರ ರೂ., 500ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗೆ 45,000 ರೂ. ನಿರ್ವಹಣಾ ವೆಚ್ಚವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ರಾಜ್ಯದಲ್ಲಿನ ಒಟ್ಟು 43,376 ಶಾಲೆಗಳ ಪೈಕಿ 50 ಮಕ್ಕಳಿರುವ 23,342 ಶಾಲೆಗಳಿವೆ. 634 ಶಾಲೆಗಳಲ್ಲಿ 500ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ.