ಬೆಳಗಾವಿ(ಸುವರ್ಣಸೌಧ): ಭೂಮಿಯ ಮಾರ್ಗಸೂಚಿ ದರವನ್ನು ಇತ್ತೀಚೆಗಷ್ಟೇ ಹೆಚ್ಚಳ ಮಾಡಿದ್ದ ಸರ್ಕಾರ ಇದೀಗ ಮುದ್ರಾಂಕ ಶುಲ್ಕ(ಸ್ಟ್ಯಾಂಪ್ ಶುಲ್ಕ) ಹೆಚ್ಚಿಸಲು ಮುಂದಾಗಿದೆ.
ಗುರುವಾರ ವಿಧಾನಸಭೆಯಲ್ಲಿ ಈ ಬಗ್ಗೆ ವಿಧೇಯಕ ಮಂಡಿಸಲಾಗಿದೆ. ಕಂದಾಯ ಸಚಿವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂಗೀಕಾರ ಕೋರಿ ಸದನದಲ್ಲಿ ವಿಧೇಯಕ ಮಂಡಿಸಿದ್ದಾರೆ.
ಬಾಡಿಗೆ, ಚೀಟಿ ಒಪ್ಪಂದ, ಭೂಮಿ ಶುದ್ಧ ಕ್ರಯಪತ್ರ, ಸಾಲದ ಒಪ್ಪಂದ, ಬ್ಯಾಂಕ್ ಗ್ಯಾರಂಟಿ ಮೊದಲಾದ ದಾಖಲೆಗಳ ನೋಂದಣಿ ಹಾಗೂ ಮನೆಗಳ ಬಾಡಿಗೆ ಕರಾರು, ಗುತ್ತಿಗೆ ಕರಾರು, ಬ್ಯಾಂಕ್ ಸಾಲದ ದಾಖಲೆಗಳು, ಪವರ್ ಆಫ್ ಪಟಾರ್ನಿ ಒಪ್ಪಂದ ಪ್ರಮಾಣ ಪತ್ರಗಳಿಗೆ ಪಡೆಯುವ ಮುದ್ರಾಂಕ ಶುಲ್ಕ ಹೆಚ್ಚಳ ಪ್ರಸ್ತಾವನೆ ಇದೆ.
ಸ್ಥಿರ ಸುತ್ತಿನ ಮಾರಾಟದ ಕರಾರಿಗೆ ಭೂಮಿಯ ಮಾರುಕಟ್ಟೆಯಾದ ಬೆಲೆ ಆಧರಿಸಿ ಗರಿಷ್ಠ 20 ಸಾವಿರ ರೂಪಾಯಿವರೆಗೆ ಮುದ್ರಾಂಕ ಶುಲ್ಕ ಸಂಗ್ರಹಿಸಲು ಪ್ರಸ್ತಾಪಿಸಲಾಗಿದೆ.
ದತ್ತು ಡೀಡ್ 500 – 1000 ರೂ., ಪ್ರಮಾಣ ಪತ್ರ 20 -100 ರೂ., 10 ಲಕ್ಷ ರೂ. ವರೆಗಿನ ಒಪ್ಪಂದ 100 -500 ರೂ., 1 ಲಕ್ಷ ರೂ.ವರೆಗಿನ ಚಿಟ್ ಒಪ್ಪಂದ 100 -200 ರೂ., ಪವರ್ ಆಫ್ ಅಟಾರ್ನಿ 100-500 ರೂ., 1000 ರೂ. ಬಾಂಡ್ ಗೆ 100 -200 ರೂ.ಗೆ ಪರಿಷ್ಕರಿಸಲಾಗಿದೆ.