BIG NEWS: ಇಲ್ಲಿದೆ 2023 ರ ಸಾರ್ವತ್ರಿಕ ರಜಾ ದಿನಗಳ ಸಂಪೂರ್ಣ ಪಟ್ಟಿ 22-11-2022 5:20AM IST / No Comments / Posted In: Karnataka, Latest News, Live News 2023ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ. ಎಲ್ಲ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ರಜಾದಿನಗಳಾಗಿದ್ದು, ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ. ಜನವರಿ 26 – ಗುರುವಾರ – ಗಣರಾಜ್ಯೋತ್ಸವ ಫೆಬ್ರವರಿ 18 – ಶನಿವಾರ – ಮಹಾಶಿವರಾತ್ರಿ ಮಾರ್ಚ್ 22 – ಬುಧವಾರ – ಯುಗಾದಿ ಹಬ್ಬ ಏಪ್ರಿಲ್ 3 – ಸೋಮವಾರ – ಮಹಾವೀರ ಜಯಂತಿ ಏಪ್ರಿಲ್ 7 – ಶುಕ್ರವಾರ – ಗುಡ್ ಫ್ರೈಡೆ ಏಪ್ರಿಲ್ 14 – ಶುಕ್ರವಾರ – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮೇ 1 – ಸೋಮವಾರ – ಕಾರ್ಮಿಕ ದಿನಾಚರಣೆ ಜೂನ್ 29 – ಗುರುವಾರ – ಬಕ್ರೀದ್ ಜುಲೈ 29 – ಶನಿವಾರ – ಮೊಹರಂ ಕಡೆ ದಿನ ಆಗಸ್ಟ್ 15 – ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ ಸೆಪ್ಟೆಂಬರ್ 18 – ಸೋಮವಾರ – ವರಸಿದ್ಧಿ ವಿನಾಯಕ ವೃತ ಸೆಪ್ಟೆಂಬರ್ 28 – ಗುರುವಾರ – ಈದ್ ಮಿಲಾದ್ ಅಕ್ಟೋಬರ್ 2 – ಸೋಮವಾರ – ಗಾಂಧಿ ಜಯಂತಿ ಅಕ್ಟೋಬರ್ 23 – ಸೋಮವಾರ – ಮಹಾನವಮಿ – ಆಯುಧ ಪೂಜೆ ಅಕ್ಟೋಬರ್ 24 – ಮಂಗಳವಾರ – ವಿಜಯದಶಮಿ ನವೆಂಬರ್ 1 – ಬುಧವಾರ – ಕನ್ನಡ ರಾಜ್ಯೋತ್ಸವ ನವೆಂಬರ್ 14 – ಮಂಗಳವಾರ – ಬಲಿಪಾಡ್ಯಮಿ, ದೀಪಾವಳಿ ನವೆಂಬರ್ 30 – ಗುರುವಾರ – ಕನಕದಾಸ ಜಯಂತಿ ಡಿಸೆಂಬರ್ 25 – ಸೋಮವಾರ – ಕ್ರಿಸ್ಮಸ್ ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜನವರಿ 15), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 23), ನರಕ ಚತುರ್ದಶಿ (ನವೆಂಬರ್ 12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅಕ್ಟೋಬರ್ 14), ಹಾಗೂ ನಾಲ್ಕನೇ ಶನಿವಾರದಂದು ಬರುವ ಕುತುಬ್ ಎ ರಂಜಾನ್ (ಏಪ್ರಿಲ್ 22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 28) ಈ ರಜೆಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಇನ್ನು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಹಾಗೆಯೇ ಮುಸಲ್ಮಾನ್ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.