ಬೆಂಗಳೂರು: ನಗರ, ಗ್ರಾಮಗಳನ್ನು ಸ್ವಚ್ಛಗೊಳಿಸಿ, ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಹಾಗೂ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರವು ಹಲವು ಸೌಲಭ್ಯಗಳನ್ನು ನೀಡಿದೆ.
ಸ್ವಚ್ಛತಾ ಕಾರ್ಮಿಕರಿಗಾಗಿ ಸರ್ಕಾರದ ವತಿಯಿಂದ ವಸತಿ ಸೌಲಭ್ಯ, ಉಚಿತ ವಿದ್ಯುತ್, ಆರೋಗ್ಯ ವಿಮೆ, ಅಡುಗೆ ಅನಿಲ, ಬ್ಯಾಂಕಿಂಗ್ ಸೌಲಭ್ಯ, ವೈಯಕ್ತಿಕ ಶೌಚಾಲಯ, ನಲ್ಲಿ ಸಂಪರ್ಕ, ಜೀವ ವಿಮೆ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದ್ದು, ಸದುಪಯೋಗಪಡೆಯುವಂತೆ ಕೋರಲಾಗಿದೆ.