ಬೆಂಗಳೂರು: ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ. ಡಿಸೆಂಬರ್ 31 ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
HSRP ಅಳವಡಿಕೆಗೆ ನ 30 ಕೊನೆ ದಿನವಾಗಿತ್ತು. ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿ ಹಳೆ ವಾಹನಗಳಿದ್ದು, 55 ಲಕ್ಷ ವಾಹನ ಮಾತ್ರ HSRP ಅಳವಡಿಸಿಕೊಂಡಿವೆ. 2019ರ ಏ. 1ಕ್ಕೆ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಯ ಮಾಡಲಾಗಿದೆ. ಬಹುತೇಕ ವಾಹನಗಳಿಗೆ ಇನ್ನೂ ಹೆಚ್.ಎಸ್.ಆರ್.ಪಿ. ಹಾಕಿಸದ ಹಿನ್ನಲೆಯಲ್ಲಿ ಇದೀಗ 5ನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ.