ಬೆಂಗಳೂರು : ಈ ಹಿಂದೆ ʼಶುಚಿʼ ಯೋಜನೆಯಡಿಯಲ್ಲಿ ಬಾಲಕಿಯರಿಗೆ ಉಚಿತವಾಗಿ ನ್ಯಾಪ್ಕಿನ್ ಪ್ಯಾಡ್ಗಳನ್ನು ವಿತರಿಸಿದ್ದ ಸರ್ಕಾರ, ʼಮೈತ್ರಿʼ ಯೋಜನೆಯಲ್ಲಿ ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮುಟ್ಟಿನ ಕಪ್ಗಳನ್ನು ವಿತರಿಸಿತ್ತು.
ಈಗ ಇನ್ನೂ ಮುಂದುವರೆದು, ʼಶುಚಿ ನನ್ನ ಮೈತ್ರಿʼ ಯೋಜನೆ ಮೂಲಕ ರಾಜ್ಯದ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸಲು ಮುಂದಾಗಿದೆ. ರಾಜ್ಯಾದ್ಯಂತ 10 ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿನಿಯರಿಗೆ 40 ಲಕ್ಷ ಮುಟ್ಟಿನ ಕಪ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಮುಟ್ಟಿನ ಕಪ್ ಬಳಕೆಯ ಪ್ರಯೋಜನಗಳು
ಮುಟ್ಟಿನ ಕಪ್ಗಳು ಪರಿಸರ ಸ್ನೇಹಿ. ಮರುಬಳಕೆ ಮಾಡಬಹುದು.ಇದರಿಂದ ಪ್ಯಾಡ್ಗಳ ವಿಲೇವಾರಿಯಂತಹ ಸಮಸ್ಯೆಗಳು ಇರುವುದಿಲ್ಲ. ಒಂದು ಕಪ್ ಅನ್ನು ಕನಿಷ್ಠ ಹತ್ತು ವರ್ಷ ಬಳಸಬಹುದು. ಉಪಯೋಗಿಸುವುದು ಬಹಳ ಸುಲಭ. ಕಿರಿಕಿರಿಯೂ ಇರುವುದಿಲ್ಲ. ಋತುಸ್ರಾವದ ಪ್ಯಾಡ್ಗಳಂತೆ ಹೀರಿಕೊಳ್ಳುವ ಬದಲಾಗಿ ಕಪ್ ಹಿಡಿದಿಟ್ಟುಕೊಳ್ಳುತ್ತದೆ. ಒಂದು ಕಪ್ ಒಂದು ಔನ್ಸ್ನಷ್ಟು ಅಂದರೆ ಸಾಮಾನ್ಯ ಪ್ಯಾಡ್ನ ಎರಡು ಪಟ್ಟು ಹಿಡಿದಿಟ್ಟುಕೊಳ್ಳಬಲ್ಲದು. ಪದೇ ಪದೇ ತೆಗೆದು ಸ್ವಚ್ಛಗೊಳಿಸಿಕೊಳ್ಳುವ ತಾಪತ್ರಯವಿಲ್ಲ. ದಿನಕ್ಕೊಮ್ಮೆ ಸ್ವಚ್ಛ ಮಾಡಿಕೊಂಡರೂ ಆದೀತು.
ʼಮುಟ್ಟಿನ ಕಪ್ʼ ನಿತ್ಯ ಪ್ರಯಾಣಿಸುವ ಮಹಿಳೆಯರಿಗೆ, ಉದ್ಯೋಗಸ್ಥ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲ. ಪ್ರವಾಸಕ್ಕೆ ಹೋಗುವ ಗೃಹಿಣಿಯರು ಮುಟ್ಟಿನ ಸಮಯದಲ್ಲಿ ನಿರಾಳರಾಗಿ ಪ್ರವಾಸ ಮಾಡಬಹುದು. ಮುಟ್ಟಿನ ಕಪ್ಗಳನ್ನು ಬಳಸುವಾಗ ಆರಂಭಿಕ ಹಂತದಲ್ಲಿ ತುಸು ಫಜೀತಿಯಾಗಬಹುದು ಅಥವಾ ಸ್ವಲ್ಪ ಕಿರಿಕಿರಿ ಅನ್ನಿಸಿದರೂ, ಕ್ರಮೇಣ ಇದುವೇ ಆರಾಮದಾಯಕ ಎನಿಸುತ್ತದೆ.
1) ಮುಟ್ಟಿನ ಕಪ್ ಪರಿಸರ ಸ್ನೇಹಿ. ಮರುಬಳಕೆ ಮಾಡಬಹುದು.
2) ಇದರಿಂದ ಪ್ಯಾಡ್ಗಳ ವಿಲೇವಾರಿಯಂತಹ ಸಮಸ್ಯೆಗಳು ಇರುವುದಿಲ್ಲ.
3) ಒಂದು ಕಪ್ ಅನ್ನು ಕನಿಷ್ಠ ಹತ್ತು ವರ್ಷ ಬಳಸಬಹುದು.
4)ಉಪಯೋಗಿಸುವುದು ಬಹಳ ಸುಲಭ, ಕಿರಿಕಿರಿಯೂ ಇರುವುದಿಲ್ಲ.
5) ಋತುಸ್ರಾವದ ಪ್ಯಾಡ್ಗಳಂತೆ ಹೀರಿಕೊಳ್ಳುವ ಬದಲಾಗಿ ಕಪ್ ಹಿಡಿದಿಟ್ಟುಕೊಳ್ಳುತ್ತದೆ.
6) ಒಂದು ಕಪ್ ಒಂದು ಔನ್ಸ್ನಷ್ಟು ಅಂದರೆ ಸಾಮಾನ್ಯ ಪ್ಯಾಡ್ನ ಎರಡು ಪಟ್ಟು ಹಿಡಿದಿಟ್ಟುಕೊಳ್ಳಬಲ್ಲದು.
7) ಪದೇ ಪದೇ ತೆಗೆದು ಸ್ವಚ್ಛಗೊಳಿಸಿಕೊಳ್ಳುವ ತಾಪತ್ರಯವಿಲ್ಲ.
8) ದಿನಕ್ಕೊಮ್ಮೆ ಸ್ವಚ್ಚಮಾಡಿಕೊಂಡರೂ ಆದೀತು.