ನವದೆಹಲಿ: ಕರ್ನಾಟಕದಲ್ಲಿ ಆದಿಚುಂಚನಗಿರಿ ಮತ್ತು ಕೇರಳದ ಚೂಲನ್ನೂರ್ ಅನ್ನು ನವಿಲು ಅಭಯಾರಣ್ಯವೆಂದು ಸರ್ಕಾರ ಘೋಷಿಸಿದೆ.
ಲೋಕಸಭೆಯಲ್ಲಿ ಇಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು, ಕೇಂದ್ರ ಸರ್ಕಾರವು ಕರ್ನಾಟಕದ ಆದಿಚುಂಚನಗಿರಿ ಮತ್ತು ಕೇರಳದ ಚೂಲನ್ನೂರ್ ಅನ್ನು ನವಿಲು ಅಭಯಾರಣ್ಯ ಎಂದು ಘೋಷಿಸಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನವಿಲುಗಳ ಸಾವಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನವಿಲುಗಳು ಶಾಖದ ಹೊಡೆತದಿಂದ ಸಾವನ್ನಪ್ಪಿವೆಯೇ ಹೊರತು ಏವಿಯನ್ ಇನ್ಫ್ಲುಯೆನ್ಸದಿಂದ ಅಲ್ಲ. ರಾಷ್ಟ್ರೀಯ ಪಕ್ಷಿ ಸಂರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನವಿಲುಗಳ ಸಂವರ್ಧನೆ ಮತ್ತು ಸಂರಕ್ಷಣಾ ಕೇಂದ್ರಗಳನ್ನು ಸಚಿವಾಲಯ ಸ್ಥಾಪಿಸಿದೆ ಎಂದು ಹೇಳಿದ್ದಾರೆ.