ನವದೆಹಲಿ: ಯುವಕರ ಅಭಿವೃದ್ಧಿಗಾಗಿ ಸ್ವಾಯತ್ತ ಸಂಸ್ಥೆ ಮೇರಾ ಯುವ ಭಾರತ್(MY Bharat) ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. MY ಭಾರತ್‌ನ ಪ್ರಾಥಮಿಕ ಉದ್ದೇಶವು ಯುವಕರ ಅಭಿವೃದ್ಧಿಗೆ ಸಂಪೂರ್ಣ ಸರ್ಕಾರಿ ವೇದಿಕೆಯಾಗಿದೆ.
ಕೇಂದ್ರ ಸಂಪುಟ ಸಭೆಯ ನಂತರ ನವದೆಹಲಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ದೇಶದಲ್ಲಿ ಸುಮಾರು 40 ಕೋಟಿ ಯುವಕರು 15-29 ವರ್ಷ ವಯಸ್ಸಿನವರಾಗಿದ್ದಾರೆ. ಯುವಜನರ ಅಭಿವೃದ್ಧಿಗೆ ತಂತ್ರಜ್ಞಾನದಿಂದ ಚಾಲಿತವಾಗಿರುವ ಒಂದು ವ್ಯಾಪಕವಾದ ಸಕ್ರಿಯಗೊಳಿಸುವ ಕಾರ್ಯವಿಧಾನವಾಗಿ ಇದು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ನಾಗರಿಕರ ನಡುವೆ ಯುವಕರು ಯುವಸೇತುವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಅಪಾರ ಯುವ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ. ಅಕ್ಟೋಬರ್ 31 ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ ಈ ಮೇರಾ ಯುವ ಭಾರತವನ್ನು ದೇಶಕ್ಕೆ ಸಮರ್ಪಿಸಲಾಗುವುದು ಎಂದು ತಿಳಿಸಿದ್ದಾರೆ.