ಕಳೆದ ಶತಮಾನದ ಅಪರೂಪದ ನಾಣ್ಯಗಳಿಗೆ ಆನ್ಲೈನ್ನಲ್ಲಿ ಭಾರೀ ಬೇಡಿಕೆ ಇದೆ. ತಮ್ಮ ಸಂಗ್ರಹದಲ್ಲಿರುವ ಹಳೆಯ ನಾಣ್ಯಗಳನ್ನು ಮಾರುವ ಮೂಲಕ ಮಂದಿ ಒಳ್ಳೆ ದುಡ್ಡು ಮಾಡುತ್ತಿದ್ದಾರೆ.
ಇಂಥ ಒಂದು ಅವಕಾಶದಲ್ಲಿ, ನಿಮ್ಮ ಬಳಿ ಇರುವ, 1957-1963ರ ನಡುವೆ ಟಂಕಿಸಲಾದ, 10ಪೈಸೆಯ ನಾಣ್ಯವನ್ನು ಮಾರುವ ಮೂಲಕ ಸಾವಿರಾರು ರೂಪಾಯಿಗಳನ್ನು ಜೇಬಿಗಿಳಿಸಬಹುದು. ಭಾರತ ಗಣರಾಜ್ಯದಲ್ಲಿ ಬಿಡುಗಡೆಯಾದ ಮೊದಲ ನಾಣ್ಯಗಳು ಇವಾಗಿವೆ.
1957ರಲ್ಲಿ ಭಾರತವು ದಶಾಂಶ ವ್ಯವಸ್ಥೆ ಪರಿಚಯಿಸಿದ್ದು, ಆ ವೇಳೆ 10ಪೈಸೆಯ ಕೆಲವೊಂದು ನಾಣ್ಯಗಳು ದಶಂಶದಲ್ಲಿ ಮೌಲ್ಯಗಳನ್ನು ಹೊಂದಿದ್ದವು. ಆದರೆ 1963ರಲ್ಲಿ ದಶಾಂಶದಲ್ಲಿ ನಾಣ್ಯಗಳನ್ನು ಮೌಲ್ಯೀಕರಿಸುವ ವ್ಯವಸ್ಥೆಗೆ ತಿಲಾಂಜಲಿ ಹಾಡಲಾಗಿತ್ತು.
ಈ ಟೀ ಸೇವಿಸಿ ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಿ
ನಾವು ಇಲ್ಲಿ ಮಾತನಾಡುತ್ತಿರುವ 10ಪೈಸೆ ನಾಣ್ಯವು ತಾಮ್ರ-ನಿಕ್ಕಲ್ ಲೋಹದಿಂದ ಮಾಡಲ್ಪಟ್ಟಿದ್ದು, ಆ ಕಾಲದ ನಾಣ್ಯಗಳಿಗಿಂತ ಭಿನ್ನವಾಗಿತ್ತು. 5 ಗ್ರಾಂ ತೂಕವಿರುವ ಈ ನಾಣ್ಯದ ವ್ಯಾಸ 23ಎಂಎಂ ಇತ್ತು. ಈ ನಾಣ್ಯಗಳನ್ನು ಬಾಂಬೆ, ಕೋಲ್ಕತ್ತಾ ಹಾಗೂ ಹೈದರಾಬಾದ್ನಲ್ಲಿರುವ ಟಂಕಶಾಲೆಗಳಲ್ಲಿ ಟಂಕಿಸಲಾಗಿತ್ತು.
ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭವಿದ್ದು, ಮತ್ತೊಂದು ತುದಿಯಲ್ಲಿ, ದೇವನಗರಿ ಲಿಪಿಯಲ್ಲಿ 10 ನಯೇ ಪೈಸೆ ಎಂದು ಬರೆಯಲಾಗಿದೆ.
ಆನ್ಲೈನ್ ಕ್ಲಾಸಿಫೈಡ್ ಪ್ಲಾಟ್ಫಾರಂಗಲ್ಲಿ ಈ ನಾಣ್ಯಗಳು ಮಾರಾಟವಾಗುತ್ತಿದ್ದು, ಇತರೆ ಜಾಲತಾಣಗಳಲ್ಲೂ ಸಹ ಮಾರಬಹುದಾಗಿದೆ.