
ನಿಮ್ಮ ಬಳಿ 2 ರೂಪಾಯಿ ಮುಖಬೆಲೆಯ ಈ ನಾಣ್ಯ ಇದ್ದಲ್ಲಿ ನಿಮ್ಮ ಖಾತೆಗೆ ಐದು ಲಕ್ಷ ರೂಪಾಯಿಗಳು ಬಂದು ಬೀಳಬಹುದು ! 1994ರಲ್ಲಿ ರಿಸರ್ವ್ ಬ್ಯಾಂಕ್ ಟಂಕಿಸಿ ಬಿಡುಗಡೆ ಮಾಡಿದ ನಾಣ್ಯ ಇದಾಗಿದೆ.
ನಾಣ್ಯದ ಹಿಂಬದಿಯಲ್ಲಿ ಭಾರತೀಯ ಧ್ವಜ ಕೆತ್ತಲಾಗಿದೆ. ಆನ್ಲೈನ್ ಕ್ಲಾಸಿಫೈಡ್ ಪೋರ್ಟಲ್ Quickrನಲ್ಲಿ ಈ ನಾಣ್ಯಕ್ಕೆ ಐದು ಲಕ್ಷ ರೂಪಾಯಿಗಳಷ್ಟು ಬೆಲೆ ಇದೆ.
Quickr ಡಾಟ್ ಕಾಮ್‌ಗೆ ಭೇಟಿ ಕೊಟ್ಟು, ಅಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಬಳಿ ಮೇಲ್ಕಂಡ ನಾಣ್ಯ ಇದ್ದರೆ ಅದರ ಫೋಟೋ ತೆಗೆದು ಅಪ್ ಲೋಡ್ ಮಾಡಿ. ಆಸಕ್ತ ಖರೀದಿದಾರರು ನಿಮ್ಮನ್ನು ಸಂಪರ್ಕಿಸಿ ಬೆಲೆಯ ವಿಚಾರವಾಗಿ ಚೌಕಾಶಿ ಮಾಡುತ್ತಾರೆ. ಈ ಚೌಕಾಶಿಯಲ್ಲಿ ಎಷ್ಟು ದುಡ್ಡು ಪಡೆಯಬಲ್ಲಿರಿ ಎಂಬುದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟಿದ್ದು.
ಗಮನಿಸಿ: ಈ ವ್ಯವಹಾರಗಳ ವೇಳೆ ವಂಚಕರ ಬಗ್ಗೆ ಎಚ್ಚರವಿರಲಿ.