
ನನ್ನ ಸೋದರಳಿಯನ ಮದುವೆಯಿಂದ ಹಿಂತಿರುಗುವಾಗ ನನ್ನ ಕಾರಿಗೆ ಗುಂಡು ಹಾರಿಸಲಾಯಿತು. ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಂದೂಕು ತೋರಿಸಿ ವಾಹನವನ್ನು ಹಿಡಿದಿದ್ದರು ! ಆಗಷ್ಟೇ ನಾನು ಬೇರೆ ವಾಹನಕ್ಕೆ ಶಿಫ್ಟ್ ಆಗಿದ್ದೆ. ನನ್ನ ಪಿಎಸ್(Personal secretary) ಮತ್ತು ಡ್ರೈವರ್ ಕಾರಿನಲ್ಲಿದ್ದರು. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ ? ಹೇಡಿಗಳು, ಕೊಲೆಗಡುಕರು ಮತ್ತು ದುರಾಸೆಯ ರಾಜ್ಯಕ್ಕೆ ಸ್ವಾಗತ ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅದೃಷ್ಟವಶಾತ್ ನಾನು ಗಾಯಗೊಂಡಿಲ್ಲ, ಆದರೆ ಈ ಘಟನೆ ನನ್ನಲ್ಲಿ ಕ್ರೋಧ ಹಾಗೂ ಜೀವಭಯ ಹುಟ್ಟುಹಾಕಿದೆ. ಹೇಡಿಯಂತೆ ರಹಸ್ಯವಾಗಿ ಕೊಲೆ ಸಂಚು ರೂಪಿಸುವ ಬದಲು ನೇರವಾಗಿ ನನ್ನೊಂದಿಗೆ ಯುದ್ಧಕ್ಕೆ ಇಳಿಯಬಹುದು. ಮುಖಾಮುಖಿ ಹೋರಾಟ ಉತ್ತಮ ಅಲ್ಲವೆ ಎಂದು ರೆಹಮ್ ಖಾನ್ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ ಗೆ ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ಜನವರಿ 2ರ ರಾತ್ರಿಯಂದು ಈ ಘಟನೆ ನಡೆದಿದೆ.
ಬ್ರಿಟಿಷ್-ಪಾಕಿಸ್ತಾನಿ ಮೂಲದ ಪತ್ರಕರ್ತೆ ಮತ್ತು ಮಾಜಿ ಟಿವಿ ನಿರೂಪಕಿ, ರೆಹಮ್ ಖಾನ್ 2014 ಇಮ್ರಾನ್ ಖಾನ್ ಅವರೊಂದಿಗೆ ಮದುವೆಯಾಗಿದ್ದರು, ಆದರೆ ಇವರ ದಾಂಪತ್ಯ 2015 ರಲ್ಲೆ ಮುರಿದಿತ್ತು. 48 ವರ್ಷ ವಯಸ್ಸಿನ ರೆಹಮ್, ತನ್ನ ಮಾಜಿ ಪತಿಯ ಆಡಳಿತ ಶೈಲಿಯನ್ನ ಆಗಾಗ್ಗೇ ತೀವ್ರವಾಗಿ ಟೀಕಿಸುತ್ತಿರುತ್ತಾರೆ.