
ಗೊರಿಲ್ಲಾ ಮತ್ತು ಮನುಷ್ಯರ ನಡುವಿನ ಒಡನಾಟದ ಬಗ್ಗೆ ಅನೇಕ ಕತೆಗಳಿವೆ, ಚಲನಚಿತ್ರಗಳೂ ಆಗಿವೆ. ಮನುಷ್ಯನ ಮಾತನ್ನು ಆಲಿಸುವ ಪ್ರಾಣಿಗಳ ಪೈಕಿ ಗೊರಿಲ್ಲಾ ಕೂಡ ಒಂದು.
ಇದೀಗ ಮೃಗಾಲಯದಲ್ಲಿ ವೀಕ್ಷಕರಿಗೆೆ ತಾಯಿ ಗೊರಿಲ್ಲಾ ತನ್ನ ಮರಿಯನ್ನು ತೋರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, ನೋಡುಗರಿಗೆ ಮುದ ನೀಡುವಂತಿದೆ.
ಮೃಗಾಲಯದಲ್ಲಿರುವ ಸಂದರ್ಶಕರಿಗೆ ತಾಯಿ ಗೊರಿಲ್ಲಾ ತನ್ನ ಮರಿ ತೋರಿಸುತ್ತದೆ ಎಂಬುದನ್ನು ಅಷ್ಟು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಆದರೆ, ವಿಡಿಯೋ ನೋಡಿದರೆ ಖಂಡಿತಾ ಎಂತವರೂ ಆಶ್ಚರ್ಯಪಡುವುದು ಖಂಡಿತಾ.
ನೂರಾರು ಮಂದಿ ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದರು, ಕೆಲವರು ಈ ಪ್ರಾಣಿಗಳನ್ನು ಪಂಜರದಲ್ಲಿ ಬಂಧಿಸುವ ಕಲ್ಪನೆಯನ್ನು ವಿರೋಧಿಸಿದ್ದಾರೆ.