ಕೆಲಸದ ಒತ್ತಡ ಎಲ್ಲರಿಗೂ ಇದ್ದೇ ಇದೆ. ಇದರ ನಡುವೆ ಮನಸ್ಸಿಗೆ ಸ್ವಲ್ಪ ಮುದ ನೀಡುವುದಕ್ಕೆ ಮನರಂಜನೆ ಬೇಕೇ ಬೇಕಲ್ಲ. ಮೊದಲೆಲ್ಲ ಜೋಕ್ಸ್ ಓದ್ತಾ ಇದ್ರು, ಹೇಳ್ತಾ ಇದ್ರು. ಈಗ ಕಾಲ ಬದಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬರುವ ಮನರಂಜನೆಯ ವಿಡಿಯೋ ತುಣುಕುಗಳೇ ಆಕರ್ಷಕ. ಐಎಫ್ಎಸ್ ಅಧಿಕಾರಿ ಸಾಮ್ರಾಟ್ ಗೌಡ ಶೇರ್ ಮಾಡಿರುವ ವಿಡಿಯೋ ನೋಡಿ !
ಗೊರಿಲ್ಲಾ ಒಂದು ಭಾರಿ ವೇಗದಲ್ಲಿ ಸೈಕಲ್ ಸವಾರಿ ಮಾಡುತ್ತ ಸಾಗುತ್ತದೆ. ಆ ಆವರಣದಲ್ಲೇ ಒಂದು ಗೊರಿಲ್ಲಾ ಕುಳಿತಿತ್ತು. ಅದರ ಎದುರೇ ಸೈಕಲ್ ಸವಾರಿ ಮಾಡಿದ ಗೊರಿಲ್ಲಾ, ಸ್ವಲ್ಪವೇ ಮುಂದೆ ಹೋಗಿ ಸೈಕಲಿಂದ ಬಿದ್ದುಬಿಡ್ತು. ಕೂಡಲೇ ಅದರ ಪ್ರತಿಕ್ರಿಯೆ ನೋಡಿ ದಂಗಾಗಿ ಬಿಡ್ತೀರಾ. ಬಿದ್ದ ಕೋಪಕ್ಕೆ ಅದು ಸೈಕಲನ್ನೇ ಎತ್ತಿ ಒಗೆದು ಬಿಡ್ತು…!
ಈ ವಿಡಿಯೋಕ್ಕೆ ಸ್ಟುಪಿಡ್ ಸೈಕಲ್ ಎಂಬ ಶೀರ್ಷಿಕೆಯನ್ನು ಗೌಡ ನೀಡಿದ್ದಾರೆ. ಈ ವಿಡಿಯೋ 62 ಸಾವಿರಕ್ಕೂ ಅಧಿಕ ವ್ಯೂವ್ಸ್ ಹೊಂದಿದ್ದು, 2,800ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಈ ವಿಡಿಯೋಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.
“ನಾವು ಅವುಗಳಿಗೆ ಉತ್ತಮ ಸೈಕ್ಲಿಂಗ್ ಮೂಲಸೌಕರ್ಯವನ್ನು ಒದಗಿಸೋಣ. ಅವುಗಳು ಖುಷಿಯಾಗಿರಲಿ, ಸೈಕ್ಲಿಂಗ್ ಮಜಾ ಅನುಭವಿಸಲಿ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು “ಎಚ್ಚರಿಕೆ: ನೀವು ಯಾರನ್ನಾದರೂ ಮೆಚ್ಚಿಸಲು ಪ್ರಯತ್ನಿಸಿದರೆ….” ಎಂದು ರಾಗ ಎಳೆದಿದ್ದಾರೆ !