ಟೆಕ್ಸಾಸ್ನ ಮಟೆಯೋ ಹರ್ನಾಂಡೆಜ಼್ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ.
ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ ಗೊರಿಲ್ಲಾ’ ಎಂದು ಕರೆಯಲ್ಪಡುವ ಈ ಮಗುವಿಗೆ ಒಂದು ತಿಂಗಳು ತುಂಬುವ ವೇಳೆಗೆ ಈ ಸಮಸ್ಯೆ ಕಾಣಿಸಿಕೊಂಡಿದೆ.
ಯಾವಾಗಲೂ ಅಲುಗಾಡುತ್ತಿದ್ದ ಈ ಮಗು ವಿಪರೀತ ತಿನ್ನುತ್ತಿದ್ದ ಕಾರಣ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆತನ ದೇಹದಲ್ಲಿರುವ ಸಕ್ಕರೆ ಪ್ರಮಾಣವು 30ರಲ್ಲಿದ್ದು, ಆತನ ಜೀವಕ್ಕೇ ಕುತ್ತಾಗುವ ಭಯವೂ ಕಂಡುಬಂದಿತ್ತು.
’ಹಂಚಿಕೊಳ್ಳಲು ಬಹಳಷ್ಟು ಕಥೆಗಳಿವೆ’: ಅಫ್ಘಾನಿಸ್ತಾನ ತೊರೆದ ಪಾಪ್ ತಾರೆ ಹೇಳಿಕೆ
ಪ್ಯಾಂಕ್ರಿಯಾಸ್ಗಳು ಅಧಿಕ ಮಟ್ಟದಲ್ಲಿ ಇನ್ಸುಲಿನ್ ಸ್ರವಿಸುವಂತೆ ಮಾಡುವ ಈ ಅಪರೂಪದ ವೈದ್ಯಕೀಯ ಸವಾಲು, ಅಪಾಯಕಾರಿ ಎನ್ನಬಹುದಾದಷ್ಟು ಕೆಳ ಮಟ್ಟದಲ್ಲಿ ಸಕ್ಕರೆ ಅಂಶ ಇರುವಂತೆ ಮಾಡುತ್ತದೆ. 50,000ದಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಐಸಿಯುನಲ್ಲಿ ಎರಡು ವಾರಗಳ ಕಾಲ ದಾಖಲಾಗಿದ್ದ ಈ ಮಗು, ಜೀವರಕ್ಷಕ ಚಿಕಿತ್ಸೆಯಿಂದ ನಿಧಾನವಾಗಿ ಚೇತರಿಕೆ ಕಂಡಿದೆ. ಆದರೆ ಈ ಅಪರೂಪದ ಕಾಯಿಲೆಯ ಅಡ್ಡಪರಿಣಾಮವಾಗಿ ಮೈಯೆಲ್ಲಾ ರೋಮ ಬೆಳೆದಿದೆ.