ಗೋರಖ್ ಪುರ: ಉತ್ತರಪ್ರದೇಶದ ಗೋರಖ್ ಪುರದ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಶವದ ಮೇಲೆ ಮಂಗಳವಾರ ರಾತ್ರಿ ಇಲಿಗಳು ದಾಳಿ ನಡೆಸಿವೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮುಖವನ್ನು ಇಲಿಗಳು ತಿಂದಿವೆ. ಸಂಬಂಧಿಕರು ಮುಖದ ಮೇಲೆ ಇಲಿ ಕಚ್ಚಿದ ಗುರುತು ಇದ್ದ ಮೃತದೇಹದವನ್ನು ಅಂತ್ಯಸಂಸ್ಕಾರಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ 21 ವರ್ಷದ ಸುಮಿತ್ ಗೌಡ್ ಅವರ ಮೃತದೇಹವನ್ನು ನಿನ್ನೆ ರಾತ್ರಿ ಗೋರಖ್ ಪುರ ಜಿಲ್ಲಾ ಆಸ್ಪತ್ರೆಗೆ ತರಲಾಯಿತು. ಸುಮಿತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾತ್ರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಮೃತರ ಕುಟುಂಬ ಸದಸ್ಯರು ಬೆಳಿಗ್ಗೆ ಶವವನ್ನು ಪಡೆಯಲು ಶವಾಗಾರಕ್ಕೆ ಬಂದಾಗ ಮುಖದ ಮೇಲೆ ಅನೇಕ ಕಚ್ಚಿದ ಗುರುತುಗಳಿದ್ದವು. ಮೃತದೇಹದ ಮೂಗನ್ನು ಇಲಿಗಳು ಕಚ್ಚಿವೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.