ಗೋರಖ್ ಪುರ: ಉತ್ತರ ಪ್ರದೇಶ ಗೋರಖ್‌ಪುರದಲ್ಲಿ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಕ್ಕಾಗಿ ಈಶಾನ್ಯ ರೈಲ್ವೆಯ(ಎನ್‌ಇಆರ್) ಪ್ರಧಾನ ಮುಖ್ಯ ಮೆಟೀರಿಯಲ್ ಮ್ಯಾನೇಜರ್ ಕೆ.ಸಿ. ಜೋಶಿ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ.
ಗೋರಖ್‌ಪುರ ಮತ್ತು ನೋಯ್ಡಾದಲ್ಲಿನ ಅವರ ಅಧಿಕೃತ ಮತ್ತು ವಸತಿ ಆವರಣದಲ್ಲಿ ಶೋಧ ಕಾರ್ಯ ನಡೆಸಿ 2.61 ಕೋಟಿ ರೂ. ನಗದು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
CBI ಪ್ರಕಾರ, ಜಿಇಎಂ ಪೋರ್ಟಲ್‌ನಲ್ಲಿ ದೂರುದಾರರ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸದಿದ್ದಕ್ಕಾಗಿ 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ದೂರು ದಾಖಲಿಸಲಾಗಿದೆ. ದೂರುದಾರರ ಸಂಸ್ಥೆಯು ಪ್ರತಿ ಟ್ರಕ್‌ಗೆ ತಿಂಗಳಿಗೆ 80,000 ರೂ.ಗೆ ವಾರ್ಷಿಕ ಒಪ್ಪಂದದ ಮೇಲೆ ಟ್ರಕ್ ಗಳನ್ನು ರೈಲ್ವೆಗೆ ಪೂರೈಸುತ್ತಿದೆ ಎಂದು ಹೇಳಲಾಗಿದೆ.
ಆರೋಪಿತ ಅಧಿಕಾರಿ ದೂರುದಾರರಿಂದ 3 ಲಕ್ಷ ರೂಪಾಯಿಗಳನ್ನು ಅನಗತ್ಯವಾಗಿ ವಸೂಲಿ ಮಾಡಿದ್ದಾರೆ. ಗೋರಖ್‌ಪುರ ಮತ್ತು ನೋಯ್ಡಾ(ಉತ್ತರ ಪ್ರದೇಶ) ನಲ್ಲಿರುವ ಆರೋಪಿಗಳ ಅಧಿಕೃತ ಮತ್ತು ವಸತಿ ಆವರಣದಲ್ಲಿ ಶೋಧ ನಡೆಸಲಾಗಿದ್ದು, 2.61 ಕೋಟಿ ರೂಪಾಯಿ ನಗದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಬಂಧಿತ ಅಧಿಕಾರಿಯನ್ನು ಲಖ್ನೋದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.