alex Certify ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಮರು ದಿನವೇ ಪ್ರತಿಭಟನೆಗೆ ಕುಳಿತ ಕುಸ್ತಿಪಟು ವಿರೇಂದ್ರ ಸಿಂಗ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಮರು ದಿನವೇ ಪ್ರತಿಭಟನೆಗೆ ಕುಳಿತ ಕುಸ್ತಿಪಟು ವಿರೇಂದ್ರ ಸಿಂಗ್​​​

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಒಂದೇ ದಿನದ ಅಂತರದಲ್ಲಿ ಹರಿಯಾಣದ ಕುಸ್ತಿಪಟು ವಿರೇಂದ್ರ ಸಿಂಗ್​ ಇಂದು ದೆಹಲಿಯ ಹರಿಯಾಣ ಭವನದ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ. ಗೂಂಗಾ ಪೈಲ್ವಾನ್​ ಎಂದೇ ಖ್ಯಾತರಾಗಿರುವ ವಿರೇಂದ್ರ ಮೂಕ ಹಾಗೂ ಕಿವುಡ ಕ್ರೀಡಾಪಟುಗಳಿಗೆ ಪ್ಯಾರಾ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ.

65ನೇ ವಯಸ್ಸಿನಲ್ಲೂ ಮಕ್ಕಳನ್ನು ಹೆರುತ್ತಾರೆ ಈ ಮಹಿಳೆಯರು….!

ವಿರೇಂದ್ರ ಸಿಂಗ್​​ 2005, 2013 ಹಾಗೂ 2017ರಲ್ಲಿ ನಡೆದ ಡೆಫ್​ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಹಾಗೂ 2009ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ. ಇದರ ಜೊತೆಯಲ್ಲಿ 2016ರ ವಿಶ್ವ ಕಿವುಡರ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಹಾಗೂ 2008 ಹಾಗೂ 2012ರಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದಿದ್ದಾರೆ.

ವಿರೇಂದ್ರರಿಗೆ 2015ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ವಿರೇಂದ್ರ ಸಿಂಗ್​, ಗೌರವಾನ್ವಿತ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಕೈಯಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ನಾನು ಆಭಾರಿಯಾಗಿದ್ದೇನೆ. ಈ ಪ್ರತಿಷ್ಟಿತ ಗೌರವಕ್ಕಾಗಿ ಸರ್ಕಾರಕ್ಕೆ ಎಂದಿಗೂ ಕೃತಜ್ಞನಾಗಿ ಇರುತ್ತೇನೆ ಎಂದು ಹೇಳಿದ್ರು.

ಪದ್ಮಶ್ರೀ ಪ್ರಶಸ್ತಿಯು ಸಾರ್ವಜನಿಕ ಜೀವನದಲ್ಲಿ ಮಾಡಿದ ಸೇವೆಗಾಗಿ ವಾರ್ಷಿಕವಾಗಿ ನೀಡಲಾಗುವ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಪದ್ಮ ಭೂಷಣ ಎಂಬ ಮೂರು ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

— Virender Singh (@GoongaPahalwan) November 9, 2021

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...