alex Certify ʼGoogleʼ ಗೆ 25 ವರ್ಷ: ಇಲ್ಲಿದೆ ಟೆಕ್‌ ದೈತ್ಯ ನಡೆದುಬಂದ ಹಾದಿಯ ಇಂಟ್ರಸ್ಟಿಂಗ್‌ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼGoogleʼ ಗೆ 25 ವರ್ಷ: ಇಲ್ಲಿದೆ ಟೆಕ್‌ ದೈತ್ಯ ನಡೆದುಬಂದ ಹಾದಿಯ ಇಂಟ್ರಸ್ಟಿಂಗ್‌ ಸ್ಟೋರಿ

ಇಂಟರ್ನೆಟ್‌ನಲ್ಲಿ ಅತೀ ದೊಡ್ಡ ಸರ್ಚ್ ಇಂಜಿನ್ ಆಗಿರುವ ಗೂಗಲ್‌ಗೆ ಇಪ್ಪತೈದು ವರ್ಷಗಳ ಸಂಭ್ರಮ. ಕಾಲು ಶತಮಾನದಷ್ಟು ಹಳೆಯದಾಗಿರುವ ಈ ಗೂಗಲ್ ಬೃಹದಾಕಾರವಾಗಿ ತನ್ನ ಛಾಪನ್ನು ವಿಸ್ತರಿಸಿಕೊಂಡಿದೆ. ಗ್ಯಾರೇಜ್‌ ಒಂದರಲ್ಲಿ ಪ್ರಾರಂಭವಾದ ಈ ಕಂಪನಿಯು ಈಗ ಪ್ರತಿ ವರ್ಷ 200 ಶತಕೋಟಿಯಷ್ಟು ಆದಾಯವನ್ನು ಗಳಿಸುತ್ತಿದೆ. ಇದರ ಜೊತೆ ವಿಶ್ವದ ನಾಲ್ಕನೇ ಅತೀ ದೊಡ್ಡ ಕಂಪನಿಯಾಗಿಯು ಬೆಳೆದಿದೆ.

ಇಂದು ನಮಗೆ ತಿಳಿದಿರುವ ಮನೆ ಮನೆಯಲ್ಲಿ ಹೆಸರಾಗಿರುವ ಗೂಗಲ್‌ನ್ನು ಮೊದಲು ಬ್ಯಾಕ್‌ರಬ್ ಎಂದು ಕರೆಯಲಾಗುತ್ತಿತ್ತು. ಗೂಗಲ್‌ನ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ತಾವು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಇದ್ದಾಗಲೇ 1996ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಬ್ಯಾಕ್‌ರಬ್ ಎಂಬ ಹೆಸರು ಪ್ರಾರಂಭದಲ್ಲಿದ್ದರೇ ಆ ಬಳಿಕ ಗೂಗಲ್ ಎಂದು ಬದಲಾಯಿಸಲಾಯಿತು.

ಇಂದು ಗೂಗಲ್ ಇಲ್ಲ ಎಂದಾದರೇ ಜಗತ್ತೇ ಮುಳುಗಿದಂತೆ ಭಾಸವಾಗುತ್ತದೆ. ಜಗತ್ತು ಈ ರೀತಿಯ ಅನುಭವವನ್ನು ಅನುಭವಿಸಿತ್ತು. ಆಗಸ್ಟ್ 16, 2013 ರಂದು ಐದು ನಿಮಿಷಗಳ ಕಾಲ ಗೂಗಲ್‌ನ ಎಲ್ಲಾ ಸೇವೆಗಳು ಬಂದ್ ಆಗಿದ್ದವು. ಇದರ ಪರಿಣಾಮ ಜಾಗತಿಕ ಇಂಟರ್ನೆಟ್ ಟ್ರಾಫಿಕ್‌ನಲ್ಲಿ 40% ಕುಸಿತವಾಗುವ ಮೂಲಕ ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಈ ಘಟನೆಯಿಂದ ನಾವು ಗೂಗಲ್‌ನಲ್ಲಿ ನಡೆಸುವ ಹುಡುಕಾಟ ಮತ್ತು ಅದರಾಚೆಗೆ ಗೂಗಲ್‌ನ ಸೇವೆಗಳ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂಬುದು ತಿಳಿಯುತ್ತೆ.

ಜೆ.ಲೋ ಅವರ ಉಡುಗೆ ಮತ್ತು ಗೂಗಲ್ ಚಿತ್ರಗಳ ಜನನ

2000 ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಜೆನ್ನಿಫರ್ ಲೋಪೆಜ್ ಅವರ ಹಸಿರು ಬಣ್ಣದ ಉಡುಗೆ ಸೆನ್ಸೇಷನ್ ಸೃಷ್ಟಿಸಿತ್ತು. ಈ ಸಂದರ್ಭದಲ್ಲೇ ಗೂಗಲ್‌ನಲ್ಲಿ ಚಿತ್ರವನ್ನು ಸಹ ಹುಡುಕುವ ಟೆಕ್ನಾಲಜಿಯನ್ನು ಪ್ರಾರಂಭಿಸಲಾಯಿತು.

ಆ ಸಂದರ್ಭದಲ್ಲಿ ಗೂಗಲ್‌ನಲ್ಲಿ ಉಡುಗೆ ಬಗೆಗೆ ಜನ ಕೇಳುವ ಪ್ರಶ್ನೆಗಳು ಹೆಚ್ಚು ಜನಪ್ರಿಯ ಹುಡುಕಾಟದ ಪ್ರಶ್ನೆಯಾಯಿತು. ಆದರೆ ಜನ ಕೇವಲ ಟೆಕ್ಸ್ಟ್ ರಿಸಲ್ಟ್ ಮಾತ್ರವಲ್ಲದೇ ಚಿತ್ರಗಳನ್ನು ಸಹ ಬಯಸಿದ್ದರು. ಈ ಬೇಡಿಕೆಯನ್ನು ಪೂರೈಸಲೆಂದೇ ಗೂಗಲ್ ಇಮೇಜ್ ಎಂಬ ಸರ್ಚ್ ಸಾಧನವನ್ನು ಪರಿಚಯಿಸಲಾಯಿತು. ಕಂಪನಿಯು 2001 ರಲ್ಲಿ ಈ ನೂತನ ವೈಶಿಷ್ಟ್ಯವನ್ನು ಹೊರತಂದಿದ್ದು ಮೊದಲ ದಿನದಿಂದಲೇ 250 ಮಿಲಿಯನ್ ಚಿತ್ರಗಳೊಂದಿಗೆ ಪ್ರಾರಂಭಿಸಲಾಯಿತು.

ಗ್ಯಾರೇಜ್‌ನಿಂದ ಟೆಕ್ ಟೈಟಾನ್‌ವರೆಗೆ ಬೆಳೆದು ನಿಂತಿರುವ ಗೂಗಲ್‌ನ್ನು ಸ್ಟಾರ್ಟ್ಅಪ್ ಯೋಜನೆಯಾಗಿ ಪ್ರಾರಂಭಿಸಲಾಯಿತು. ಗೂಗಲ್‌ನ ಮೊದಲ ಕಛೇರಿ ಬಾಡಿಗೆ ಗ್ಯಾರೇಜ್ ಆಗಿತ್ತು. ಈಗ ಯೂಟ್ಯೂಬ್‌ನ CEO ಆಗಿರುವ ವೊಜ್ಸಿಕಿ, ಗೂಗಲ್‌ನ ಮೊದಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು. ಇನ್ನು ಗೂಗಲ್‌ನ ಇಮೇಲ್ ಸೇವೆಯಾದ ಜಿಮೇಲ್‌ನ್ನು 2004 ರಲ್ಲಿ ಏಪ್ರಿಲ್ ಫೂಲ್ ದಿನದಂದು ಪ್ರಾರಂಭಿಸಲಾಯಿತು. ಈ ಘೋಷಣೆಯನ್ನು ಅನೇಕರು ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದರು. ಆದ್ರೆ ಆ ಬಳಿಕ ಇದು ಯಶಸ್ವಿಯಾಗಿ ಹೊರಹೊಮ್ಮಿತು. ಸದ್ಯ ಪ್ರತಿದಿನ ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಸೇವೆಯನ್ನು ಜಿಮೇಲ್ ನೀಡುತ್ತಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...