ಪುಟ್ಟದೊಂದು ಜಾಲತಾಣವಾಗಿ ಆನ್ಲೈನ್ ಲೋಕ ಪ್ರವೇಶಿಸಿದ 23 ವರ್ಷಗಳ ಬಳಿಕ ಗೂಗಲ್ ಅದ್ಯಾವ ಪರಿ ಬೆಳೆದಿದೆ ಎಂಬುದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದ ವಿಚಾರ. ಇಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೂಗಲ್ ಇಲ್ಲದೇ ಪ್ರತಿಯೊಬ್ಬರ ದಿನನಿತ್ಯದ ಬದುಕು ನಡೆಯಲು ಸಾಧ್ಯವೇ ಇಲ್ಲವೆಂಬ ಮಟ್ಟದಲ್ಲಿ ಹಾಸುಹೊಕ್ಕಾಗಿದೆ.
ಯಾವುದೇ ಮಾಹಿತಿ ಬೇಕೆಂದರೂ ಸರ್ಚ್ ಮಾಡಬೇಕಾದಲ್ಲಿ ’ಗೂಗಲ್’ ಮಾಡಿ ನೋಡಿ ಎನ್ನುವ ಮಟ್ಟದಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗೂಗಲ್‌ನ ಸರ್ಚ್ ಎಂಜಿನ್ ಕಳೆದ ಎರಡು ದಶಕಗಳಲ್ಲಿ ಜಗತ್ತಿನಾದ್ಯಂತ ಜನರ ಮೊದಲ ಆದ್ಯತೆಯ ಜ್ಞಾನ ಭಂಡಾರವಾಗಿದೆ.
ತನ್ನ 23ನೇ ಹುಟ್ಟುಹಬ್ಬದ ಪ್ರಯುಕ್ತ ಕಂಪನಿಯು ತನ್ನ ಟ್ರೇಡ್ ಮಾರ್ಕ್ ಡೂಡಲ್‌ನಲ್ಲಿ ಕೇಕ್ ಇಡುವ ಮೂಲಕ ವಿಶೇಷವಾಗಿ ಸಂಭ್ರಮಿಸುತ್ತಿದೆ. ವಿಶೇಷ ಸಂದರ್ಭಗಳು ಹಾಗೂ ವ್ಯಕ್ತಿಗಳ ಸ್ಮರಣೆ ವೇಳೆ ತನ್ನದೇ ಆದ ಶೈಲಿಯಲ್ಲಿ ಡೂಡಲ್ ರಚಿಸುವ ಗೂಗಲ್ ಇದೀಗ ತನ್ನದೇ ಬರ್ತ್‌ಡೇಗೊಂದು ಡೂಡಲ್ ತರುವ ಮೂಲಕ ತನ್ನ ಬಳಕೆದಾರರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ.
BIG NEWS: ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿರುವಾಗ ಬಂದ್ ಮಾಡಿ ತೊಂದರೆ ಕೊಡುವುದು ಸರಿಯಲ್ಲ; ಪ್ರತಿಭಟನಾಕಾರರಿಗೆ ಸಿಎಂ ಮನವಿ
ಸೆಪ್ಟೆಂಬರ್ 1998ರಲ್ಲಿ ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್ ವಿವಿಯ ಲ್ಯಾರಿ ಪೇಜ್ ಹಾಗೂ ಸೆರ್ಜೆ ಬ್ರಿನ್ ಎಂಬ ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳು ಗೂಗಲ್ ಅನ್ನು ಹುಟ್ಟುಹಾಕಿದ್ದರು.
2004ರಲ್ಲಿ ಶೇರು ಮಾರುಕಟ್ಟೆ ಪ್ರವೇಶಿಸಿದ ಗೂಗಲ್, 2015ರಲ್ಲಿ ಆಲ್ಫಬೆಟ್ ಸಮೂಹದ ಸಂಸ್ಥೆಯಾಯಿತು. ಇಂದಿನ ಮಟ್ಟಿಗೆ ಜಗತ್ತಿನ 150ಕ್ಕೂ ಅಧಿಕ ಭಾಷೆಗಳಲ್ಲಿ ಸರ್ಚ್ ಎಂಜಿನ್ ಕೆಲಸ ಮಾಡುತ್ತಿದೆ.
ಗೂಗಲ್ ಸಿಇಓ ಸ್ಥಾನಕ್ಕೆ ಲ್ಯಾರಿ ಪೇಜ್ ನಂತರ 2015ರಲ್ಲಿ ಬಂದ ಸುಂದರ್ ಪಿಚ್ಚೈ ಈಗಲೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ.