alex Certify ಇಲ್ಲಿದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಬೆಸ್ಟ್ ಅಪ್ಲಿಕೇಷನ್ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಬೆಸ್ಟ್ ಅಪ್ಲಿಕೇಷನ್ ಪಟ್ಟಿ

ಗೂಗಲ್ ಪ್ರತಿ ವರ್ಷದಂತೆಯೇ ಈ ವರ್ಷವೂ ಗೂಗಲ್ ಪ್ಲೇ ಸ್ಟೋರ್ ನ ಅತ್ಯುತ್ತಮ ಗೇಮ್ ಹಾಗೂ ಅಪ್ಲಿಕೇಷನ್ ಪಟ್ಟಿ ಬಿಡುಗಡೆ ಮಾಡಿದೆ. Bitclass ಅತ್ಯುತ್ತಮ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. BGMI ಅತ್ಯುತ್ತಮ ಗೇಮ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

BitClass, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌  ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಲೈವ್ ತರಗತಿಗಳನ್ನು ತೆಗೆದುಕೊಳ್ಳಲು ನೆರವಾಗಿದೆ. ಇನ್ನು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಪಬ್ಜಿಗೆ ಪರ್ಯಾಯ ಆಟವಾಗಿದೆ.

ಗೂಗಲ್ ಕ್ಲಬ್‌ಹೌಸ್, ವರ್ಷದ ಬಳಕೆದಾರರ ಆಯ್ಕೆಯ ಅಪ್ಲಿಕೇಶನ್ ಎಂಬ ಹೆಗ್ಗಳಿಕೆ ಪಡೆದಿದೆ. ಕ್ಲಬ್‌ಹೌಸ್, ಧ್ವನಿ ಆಧಾರಿತ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರನ್ನು ಪರಸ್ಪರ ಸಂಪರ್ಕಿಸಲು ಮತ್ತು ಮಾತನಾಡಲು ಅವಕಾಶ ಮಾಡಿಕೊಡುತ್ತದೆ. Garena Free Fire Max 2021 ರ ಬಳಕೆದಾರರ ಆಯ್ಕೆಯ ಆಟವಾಗಿದೆ.

ಗೂಗಲ್ ಪ್ಲೇ ಬೆಸ್ಟ್ ಆಫ್ ಇಂಡಿಯಾ 2021 ಪ್ರಶಸ್ತಿ ಪಟ್ಟಿ:

2021 ರ ಅತ್ಯುತ್ತಮ ಅಪ್ಲಿಕೇಶನ್ – ಬಿಟ್‌ಕ್ಲಾಸ್

2021 ರ ಅತ್ಯುತ್ತಮ ಆಟ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ

2021 ರ ಬಳಕೆದಾರರ ಆಯ್ಕೆಯ ಅಪ್ಲಿಕೇಶನ್ – ಕ್ಲಬ್‌ಹೌಸ್

2021 ರ ಬಳಕೆದಾರರ ಆಯ್ಕೆಯ ಆಟ – Garena Free Fire Max

2021 ರಲ್ಲಿ ಭಾರತದ ಅತ್ಯುತ್ತಮ ಅಪ್ಲಿಕೇಶನ್‌ ಪಟ್ಟಿ:

ಮನರಂಜನೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

– ಫ್ರಂಟ್ ರಾ (FrontRow)

– ಕ್ಲಬ್ಹೌಸ್ (Clubhouse )

– ಹಾಟ್‌ಸ್ಟೆಪ್ (Hotstep)

ದೈನಂದಿನ ಅಗತ್ಯಗಳಿಗೆ ಅತ್ಯುತ್ತಮ ಅಪ್ಲಿಕೇಶನ್‌:

– Sortizy

– SARVA

– Guardians from Truecaller

ವೈಯಕ್ತಿಕ ಬೆಳವಣಿಗೆಗೆ ಅತ್ಯುತ್ತಮ ಅಪ್ಲಿಕೇಶನ್‌ :

– Bitclass

– EMBIBE

– Evolve Mental Health

ಅತ್ಯುತ್ತಮ ಗೇಮ್ ಚೇಂಜರ್ಸ್ :

– JanKenUP!

– Unmaze – a myth of shadow & light

– NieR Re[in]carnation

– Tears of Themis

ಅತ್ಯುತ್ತಮ ಭಾರತೀಯ ಆಟ :

– DeLight: The Journey Home

– Huntdown

– My Friend Pedro

– Ronin: The Last Samurai

– Bird Alone

ಭಾರತದಲ್ಲಿ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮೊಬೈಲ್ ಗೇಮ್ ಜೊತೆ ಅನೇಕ ಕೆಲಸಗಳಿಗೆ ಭಾರತೀಯರು ಅಪ್ಲಿಕೇಷನ್ ಬಳಕೆ ಮಾಡ್ತಿದ್ದಾರೆ. ಗೂಗಲ್ ನೀಡುವ ಈ ಪಟ್ಟಿ, ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...