ನಟ ಶಿವಾಜಿ ಗಣೇಶನ್ 93ನೇ ಜಯಂತಿಯ ಪ್ರಯುಕ್ತ ಗೂಗಲ್, ಡೂಡಲ್ ಮೂಲಕ ಗೌರವ ಅರ್ಪಿಸಿದೆ.
ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಶಿವಾಜಿ ಗಣೇಶನ್ ದೇಶ ಕಂಡ ಅತ್ಯಂತ ಅಪ್ರತಿಮ ನಟರಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿದ್ದಾರೆ.
ಬೆಂಗಳೂರು ಮೂಲದ ಕಲಾವಿದ ನೂಪುರ್ ರಾಜೇಶ್ ಚೋಕ್ಸಿ ಈ ಡೂಡಲ್ನ್ನು ರಚಿಸಿದ್ದಾರೆ.
ಶಿವಾಜಿ 1928ರ ಅಕ್ಟೋಬರ್ 1ರಂದು ತಮಿಳುನಾಡಿನ ವಿಲ್ಲುಪುರಂನಲ್ಲಿ ಜನಿಸಿದರು. ಗಣೇಶಮೂರ್ತಿ ಎಂಬ ಹೆಸರನ್ನು ಹೊಂದಿದ್ದ ಇವರು 7ನೇ ವಯಸ್ಸಿಗೆ ಮನೆಯನ್ನು ತ್ಯಜಿಸಿ ನಾಟಕ ತಂಡವನ್ನು ಸೇರಿಕೊಂಡು. ಇಲ್ಲಿ ಅವರು ಮೊದಲು ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಿದ್ದರು. ಕ್ರಮೇಣ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು.
1945ರ ಡಿಸೆಂಬರ್ ತಿಂಗಳಿನಲ್ಲಿ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಿದರು. ಈ ಪಾತ್ರಕ್ಕೆ ಗಣೇಶ ಮೂರ್ತಿ ಎಷ್ಟು ಜೀವ ತುಂಬಿದ್ದರು ಎಂದರೆ ಇವರ ಹೆಸರು ಶಿವಾಜಿ ಗಣೇಶನ್ ಆಗಿ ಬದಲಾಯಿತು.
ಸೌರವ್ ಲೋಕೇಶ್ ಲುಕ್ ರಿವೀಲ್ ಮಾಡಿದ ‘ಭಜರಂಗಿ 2’ ಚಿತ್ರತಂಡ
1952ರಲ್ಲಿ ಪರಾಶಕ್ತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಐದು ದಶಕಗಳಲ್ಲಿ ಶಿವಾಜಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1961ರ ಪಸಮಲಾರ್, 1964ರ ನವರಾತ್ರಿ ಸಿನಿಮಾಗಳು ಶಿವಾಜಿ ನಟನೆಯನ್ನೂ ಈಗಲೂ ನೆನಪಿಸುವಂತಿದೆ. ಈ ಸಿನಿಮಾದಲ್ಲಿ ಶಿವಾಜಿ ಬರೋಬ್ಬರಿ 9 ಪಾತ್ರಗಳಲ್ಲಿ ನಟಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಶಿವಾಜಿ ಮಾಡಿದ ಸಾಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. 1960ರಲ್ಲಿ ವೀರಂಪಾಡಿಯ ಕಟ್ಟಬೊಮ್ಮನ್ ಸಿನಿಮಾಗಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಣೇಶನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 1997ರಲ್ಲಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾಫಾಲ್ಕೆಯನ್ನು ನೀಡಿ ಗೌರವಿಸಲಾಗಿದೆ.