ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಹೆಚ್ಚಾಗ್ತಿದ್ದಂತೆ ಜನರು ಸಿಬ್ಬಂದಿ ಜೊತೆ ಚರ್ಚೆ ನಡೆಸಲು ಗೂಗಲ್ ಮೀಟ್ ನಂತಹ ಫ್ಲಾಟ್ಫಾರ್ಮ್ ಬಳಸುತ್ತಿದ್ದಾರೆ. ಖಾಸಗಿ ಜಿ-ಮೇಲ್ ಮೂಲಕ ಗೂಗಲ್ ಮೀಟ್ ಬಳಸ್ತಿದ್ದ ಬಳಕೆದಾರರಿಗೆ ಈಗ ಮಹತ್ವದ ಸುದ್ದಿ ಸಿಕ್ಕಿದೆ.
ಗೂಗಲ್ ಮೀಟ್ ಬಳಕೆದಾರರು ಇನ್ಮುಂದೆ ಕೇವಲ 60 ನಿಮಿಷಗಳ ಕಾಲ ಗ್ರೂಪ್ ವೀಡಿಯೊ ಕರೆ ಬಳಸಬಹುದಾಗಿದೆ. ಈ ಸೇವೆಯ ಲಾಭವನ್ನು ಉಚಿತವಾಗಿ ಪಡೆದುಕೊಳ್ಳುತ್ತಿರುವ ಜನರ ಮೇಲೆ ಗೂಗಲ್ ಸಮಯ ಮಿತಿಯನ್ನು ವಿಧಿಸಿದೆ. ಗೂಗಲ್ ಗಡವು ಮಿತಿ ಬಗ್ಗೆ ಕಳೆದ ವರ್ಷದಿಂದ ಚರ್ಚೆ ನಡೆಸುತ್ತಿತ್ತು. ಇತರ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸ್ಪರ್ಧಿಸಲು ಯಾವುದೇ ಗಡುವು ವಿಧಿಸಿರಲಿಲ್ಲ. ಆದ್ರೀಗ ಕಂಪನಿ ಗಡುವು ವಿಧಿಸಿದೆ.
ಹೊಸ ನಿಯಮದ ಬಗ್ಗೆ ಎಲ್ಲರಿಗೂ ಮಾಹಿತಿ ಕಳುಹಿಸಲಾಗಿದೆ ಎಂದು ಕಂಪನಿ ಹೇಳಿದೆ. ಮೂವರು ವ್ಯಕ್ತಿಗಳ ಜೊತೆ ಗೂಗಲ್ ಮೀಟ್ ನಲ್ಲಿದ್ದರೆ 1 ಗಂಟೆ ನಂತ್ರ ಮೀಟಿಂಗ್ ಮುಂದುವರಿಸಲು ಸಾಧ್ಯವಿಲ್ಲ. ಆದ್ರೆ 24 ಗಂಟೆಯಲ್ಲಿ ಎಷ್ಟು ಬಾರಿ ಬೇಕಾದ್ರೂ ಇದನ್ನು ಬಳಸಬಹುದು. ಇದಕ್ಕೆ ಮಿತಿ ಹೇರಲಾಗಿಲ್ಲ.