‘ಮ್ಯಾಪ್ಸ್’ ಸೇವೆ ನೀಡುವ ಮೂಲಕ ಬಳಕೆದಾರರಿಗೆ, ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿರುವ ಗೂಗಲ್ ಈಗ ಭಾರತದಲ್ಲಿ ಮತ್ತೊಂದು ಸೇವೆಯನ್ನು ಆರಂಭಿಸುತ್ತಿದೆ. ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಆರಂಭವಾಗುತ್ತಿದ್ದು, ಇದನ್ನು ಬೆಂಗಳೂರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಶುರು ಮಾಡಲಾಗಿದೆ.
ಗೂಗಲ್ ಸ್ಟ್ರೀಟ್ ವ್ಯೂ ಪ್ರತ್ಯೇಕ ಆಪ್ ಆಗಿದ್ದು, ಇದನ್ನು ಡೌನ್ಲೋಡ್ ಮಾಡಿಕೊಂಡು ಬೇಕಾದ ಪ್ರದೇಶದ ಮೇಲೆ ಕ್ಲಿಕ್ ಮಾಡಿ ಜೂಮ್ ಮಾಡಿದರೆ ಆ ಪ್ರದೇಶದ ಮಾಹಿತಿ, ರಸ್ತೆಗಳಲ್ಲಿನ ವೇಗಮಿತಿ, ವಾಯು ಗುಣಮಟ್ಟದ ಮಾಹಿತಿ ಮೊದಲಾದವು ಲಭ್ಯವಾಗುತ್ತದೆ.
ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ ಹೈದರಾಬಾದ್, ಕೋಲ್ಕೋತ, ಚೆನ್ನೈ, ದೆಹಲಿ, ಮುಂಬೈ, ಪುಣೆ, ನಾಸಿಕ್, ವಡೋದರ, ಅಹಮದ್ ನಗರ ಮತ್ತು ಅಮೃತಸರದಲ್ಲಿ ಈ ಸೇವೆಗಳು ಲಭ್ಯವಾಗಲಿವೆ.
ಸ್ಟ್ರೀಟ್ ವ್ಯೂ ಸೇವೆ ಆರಂಭಿಸಲು google ಈಗಾಗಲೇ ಸ್ಥಳೀಯ ಪಾಲುದಾರರ ಮೂಲಕ ಹೊಸ ಫೋಟೋಗಳನ್ನು ಪಡೆದುಕೊಂಡಿದೆ ಎನ್ನಲಾಗಿದ್ದು, ಭಾರತದ 10 ನಗರಗಳ 1.5 ಲಕ್ಷ ಕಿಲೋಮೀಟರ್ ವ್ಯಾಪ್ತಿಯ ಮಾಹಿತಿಗಳು ಫೋಟೋ ಸಮೇತ ಒಳಗೊಂಡಿರುತ್ತದೆ.