ಇತ್ತೀಚಿನ ದಿನಗಳಲ್ಲಿ ಗೂಗಲ್ ಎಲ್ಲರ ಜೀವನದ ಒಂದು ಭಾಗವಾಗಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗ ಅನೇಕ ಬಾರಿ ಗೂಗಲ್ ಸರ್ಚ್ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ. ಪ್ರತಿಯೊಂದು ವಿಷ್ಯಕ್ಕೂ ಗೂಗಲ್ ಸರ್ಚ್ ಮಾಡುವವರನ್ನು ನಾವು ನೋಡಬಹುದು. ಗೂಗಲ್ ಅನೇಕ ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಆದ್ರೆ ಎಲ್ಲ ಸಂದರ್ಭದಲ್ಲೂ ಗೂಗಲ್ ನಂಬಿದ್ರೆ ನೀವು ತೊಂದರೆಗೆ ಸಿಲುಕಿವ ಸಾಧ್ಯತೆಯಿದೆ.
ಗೂಗಲ್ ಇಂಗ್ಲೀಷ್, ಹಿಂದಿ, ಕನ್ನಡ ಸೇರಿದಂತೆ ಎಲ್ಲ ಭಾಷೆಯ ಶಬ್ಧಗಳ ಅರ್ಥವನ್ನು ಹೇಳುತ್ತದೆ. ಆದ್ರೆ ಗೂಗಲ್ ನಲ್ಲಿ ತೋರಿಸುವ ಎಲ್ಲ ಶಬ್ಧಗಳ ಅರ್ಥ ಸರಿಯಾಗಿರಬೇಕೆಂದೇನಿಲ್ಲ. ಇದಕ್ಕೆ unworried ಶಬ್ಧ ಉತ್ತಮ ಉದಾಹರಣೆ. ಗೂಗಲ್ ನಲ್ಲಿ ಇದ್ರ ಅರ್ಥ ಹುಡುಕಿದ್ರೆ ಅವಿವಾಹಿತ (Unmarried) ಅರ್ಥ ಬರುತ್ತದೆ. ಇದನ್ನು ನೋಡಿದ ಜನರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದು ಗೊತ್ತಾಗ್ತಿದ್ದಂತೆ ಗೂಗಲ್ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.