ತಂತ್ರಜ್ಞಾನ ದೈತ್ಯ ಗೂಗಲ್ ಭೂಕಂಪದಿಂದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಆರಂಭಿಸಿದೆ. ಇದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಹೊಂದಿರುವ ಜನರಿಗೆ ಭೂಕಂಪದ ಅಪಾಯದಿಂದ ಪಾರಾಗಲು ಸಹಾಯ ಮಾಡುತ್ತದೆ.
ಭೂಕಂಪ ಪ್ರಪಂಚದ ಸರ್ವೇ ಸಾಮಾನ್ಯವಾದ ನೈಸರ್ಗಿಕ ವಿಕೋಪಗಳ ಪೈಕಿ ಒಂದಾಗಿದೆ. ಇದರಿಂದ ಅನೇಕರು ಪ್ರಾಣ ತೆತ್ತ ಉದಾಹರಣೆಗಳಿವೆ. ಆದರೆ ಗೂಗಲ್ನ ಈ ಹೊಸ ವ್ಯವಸ್ಥೆಯಿಂದಾಗಿ ನಾವು ನಮ್ಮ ಪ್ರೀತಿ ಪಾತ್ರರನ್ನು ಭೂಕಂಪದ ಅಪಾಯದಿಂದ ಬಚಾವು ಮಾಡಿಕೊಳ್ಳಬಹುದಾಗಿದೆ.
ಭಾರತದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಜೊತೆಯಲ್ಲಿ ಸಮಾಲೋಚನೆ ನಡೆಸಿದ ಬಳಿಕ ಈ ಭೂಕಂಪ ವ್ಯವಸ್ಥೆಯನ್ನು ಪತ್ತೆ ಮಾಡುವ ಸೆನ್ಸಾರ್ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಪರಿಚಯಿಸಲಾಗಿದೆ. ಪ್ರತಿಯೊಂದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಚಿಕ್ಕದಾದ ಅಕ್ಸೆಲೆರೋಮೀಟರ್ಗಳನ್ನ ಹೊಂದಿದ್ದು ಇವುಗಳು ಮಿನಿ ಸೀಸ್ಮೀಮೀಟರ್ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಫೋನ್ನ್ನು ಪ್ಲಗ್ ಇನ್ ಮಾಡಿದಾಗ ಹಾಗೂ ಜಾರ್ಜ್ ಮಾಡಿದಾಗ ಅದು ಭೂಕಂಪದ ಸಾಧ್ಯಾಸಾಧ್ಯತೆಗಳನ್ನು ಪತ್ತೆ ಮಾಡುತ್ತದೆ.
ಅನೇಕ ಸ್ಮಾರ್ಟ್ಫೋನ್ಗಳು ಒಂದೇ ಬಾರಿಗೆ ಭೂಕಂಪದ ಅನುಭವ ಪತ್ತೆ ಮಾಡಿದರೆ ಭೂಕಂಪ ಆ ಸ್ಥಳದಲ್ಲಿ ಸಂಭವಿಸಬಹುದು ಎಂದು ಅಂದಾಜಿಸಬಹುದಾಗಿದೆ. ಆಗ ನಾವು ಕೂಡಲೇ ಅಪಾಯದಿಂದ ಪಾರಾಗಬಹುದಾಗಿದೆ.