ಭಾರತದಲ್ಲಿನ ಅದ್ಧೂರಿ ಹಬ್ಬಗಳಲ್ಲಿ ಒಂದಾದ ದೀಪಾವಳಿಗೆ ದಿನಗಳು ಬಾಕಿಯಿರುವಾಗ, ಕೋವಿಡ್ ವಿರಾಮದ ನಂತರ ಜನರು ಭರ್ಜರಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.
ಈ ವರ್ಷ ಗೂಗಲ್ ಕೂಡ ತನ್ನ ವಿಶಿಷ್ಟ ಮತ್ತು ಚಮತ್ಕಾರಿ ರೀತಿಯಲ್ಲಿ ದೀಪಾವಳಿಯ ವೇಳೆ ತೊಡಗಿಸಿಕೊಂಡಿದೆ.
ಗೂಗಲ್ ಮೂಲಕ ದೀಪಗಳನ್ನು ಬೆಳಗಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ವೆಬ್ ಬ್ರೌಸರ್ ತೆರೆದು ಗೂಗಲ್ ಸರ್ಚ್ಗೆ ಹೋಗಿ ನಂತರ ಸರ್ಚ್ ಇಂಜಿನ್ಗಳ ಸರ್ಚ್ ಬಾರ್ನಲ್ಲಿ ‘ದೀಪಾವಳಿ 2022’ ಎಂದು ಟೈಪ್ ಮಾಡಿ
ದೀಪಾವಳಿ ಫಲಿತಾಂಶಗಳಿಂದ ತುಂಬಿದ ಪುಟವು ಕಾಣಿಸುತ್ತದೆ. ಸ್ಕ್ರೀನ್ ಎಡಭಾಗದಲ್ಲಿ ಸ್ಪಾರ್ಕ್ಲಿ ದೀಪದ ಚಿತ್ರದೊಂದಿಗೆ ಪಾಪಪ್ ಆಗುತ್ತದೆ. ಮೌಸ್ ಅನ್ನು ದೀಪದ ಮೇಲೆ ಇರಿಸಿ ಕ್ಲಿಕ್ ಮಾಡಿದಾಗ ಸ್ಕ್ರೀನ್ ಬೂದು ಬಣ್ಣಕ್ಕೆ ತಿರುಗುತ್ತದೆ. ಕೆಲವು ದೀಪಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಒಂದು ಬೆಳಗಿದ ದೀಪಗಳೊಂದಿಗೆ, ಇತರ ದೀಪಗಳ ಬಳಿ ಅದನ್ನು ತೆಗೆದುಕೊಂಡು ಹೋಗಿ ಎಲ್ಲಾ ಇತರ ದೀಪಗಳನ್ನು ಬೆಳಗಿಸಬಹುದು