
ಅ ಅಂದ್ರೆ ಅಪ್ಪು, ಆ ಅಂದ್ರೆ ಆಕಾಶ ದೀಪವು ನೀನು, ಇ ಅಂದರೆ ಇತಿಹಾಸ, ಈ ಅಂದ್ರೆ ಈ ಸಲ ಕಪ್ ನಮ್ದೇ… ಹೀಗೆ ಕನ್ನಡ ಸ್ವರಗಳನ್ನು ರಚಿಸುವ ಮೂಲಕ ಗೂಗಲ್ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷವಾಗಿ ಶುಭಾಶಯ ಕೋರಿದೆ.
ಟೆಕ್ ದೈತ್ಯ ಗೂಗಲ್ ಕೋರಿರುವ ಶುಭಾಶಯ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಿಮಗಾಗಿ ಸುಂದರ ಕನ್ನಡ ಸ್ವರಗಳು, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೇ” ಎಂದು ಟೆಕ್ ದೈತ್ಯ ಗೂಗಲ್ ಇಂಡಿಯಾ ಕನ್ನಡ ಸ್ವರಗಳೊಂದಿಗೆ ಶುಭಾಶಯ ಕೋರಿದೆ. ಅ ದಿಂದ ಅಃ ವರೆಗೂ ಒಂದೊಂದು ಅಕ್ಷರಕ್ಕೂ ವಾಕ್ಯ ರಚಿಸಿ ಕನ್ನಡ ಸ್ವರಗಳಿಗೆ ಗೌರವ ಸಲ್ಲಿಸಿದೆ. ಗೂಗಲ್ ಶುಭಾಶಯದ ಈ ಕ್ರಮವನ್ನು ಕನ್ನಡಿಗರು ಶ್ಲಾಘಿಸಿದ್ದು, ಧನ್ಯವಾದ ಹೇಳಿದ್ದಾರೆ.