alex Certify ಗೂಗಲ್​ ಕ್ರೋಮ್​ ಬಳಕೆದಾರರಿಗೆ ಗುಡ್ ನ್ಯೂಸ್; ಹ್ಯಾಕಿಂಗ್ ತಡೆಗಟ್ಟುವ ಸಲುವಾಗಿ ‘ಪಾಸ್ ಕೀ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಕ್ರೋಮ್​ ಬಳಕೆದಾರರಿಗೆ ಗುಡ್ ನ್ಯೂಸ್; ಹ್ಯಾಕಿಂಗ್ ತಡೆಗಟ್ಟುವ ಸಲುವಾಗಿ ‘ಪಾಸ್ ಕೀ’

ಟೆಕ್​ಲೋಕದ ದೈತ್ಯ ಗೂಗಲ್ ಕಂಪೆನಿಯು ತನ್ನ ಕ್ರೋಮ್ (Google Chrome) ಬಳಕೆದಾರರಿಗೆ ಹೊಸ ಅಪ್​ಡೇಟ್​ ಹೊರತಂದಿದೆ. ಇದರ ಹೆಸರು ಪಾಸ್​ಕೀ. ಇದರ ಮೂಲಕ ಬಳಕೆದಾರರು ಪಾಸ್‌ವರ್ಡ್‌ಗಳನ್ನು ಟೈಪ್ ಮಾಡದೆಯೇ ಲಾಗಿನ್ ಮಾಡಬಹುದಾಗಿದೆ. ಅಂದರೆ ಈ ಹೊಸ ಫೀಚರ್ಸ್‌ನಲ್ಲಿ ಬಳಕೆದಾರರು ಪಾಸ್‌ಕೀಗಳೊಂದಿಗೆ ಲಾಗ್ ಇನ್ ಆಗಬಹುದಾಗಿದೆ.

ಹ್ಯಾಕಿಂಗ್ ಮತ್ತು ಫಿಶಿಂಗ್ ಸಮಸ್ಯೆಗಳನ್ನು ಎದುರಿಸಲು ಗೂಗಲ್​ ಈ ರೀತಿಯ ಸೆಕ್ಯುರಿಟಿಗಾಗಿ ಫೀಚರ್ಸ್​ ಅನ್ನು ಪರಿಚಯಿಸಿದೆ. ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತದೆ. ಹಣಕಾಸು ವ್ಯವಹಾರ, ಇತರ ಉದ್ಯಮಗಳ ಬಗ್ಗೆ ಹೆಚ್ಚು ಗಮನದಲ್ಲಿಟ್ಟುಕೊಂಡು ಈ ಅಪ್​ಡೇಟ್​ ಮಾಡಲಾಗಿದೆ.

ಇನ್ನು ಮುಂದೆ ಗೂಗಲ್ ಕ್ರೋಮ್​ಗೆ ಲಾಗಿನ್​ ಆಗಬೇಕಾದರೆ ಯಾವುದೇ ಪಾಸ್​ವರ್ಡ್​​ಗಳನ್ನು ಹಾಕಬೇಕಾಗಿಲ್ಲ ಡೈರೆಕ್ಟ್​ ಆಗಿಯೇ ಓಪನ್ ಮಾಡಬಹುದು. ಆದರೆ ಇದರ ಬದಲಿಗೆ ಪಾಸ್​​ಕೀ ಎಂಬ ಫಿಚರ್ಸ್​ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪಾಸ್‌ಕೀ ಯಾವುದೇ ಕಾರಣಕ್ಕೂ ಮರುಬಳಕೆ ಮಾಡಲಾಗುವುದಿಲ್ಲ.

ಈ ಸರ್ವರ್​ಗೆ ಯಾವುದೇ ರೀತಿಯ ಹ್ಯಾಕ್​ ಆಗುವುದಿಲ್ಲ. ಈ ಫಿಚರ್ಸ್​ ಬೇರೆ ಬೇರೆ ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ಬ್ರೌಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಎರಡರಲ್ಲೂ ಇದನ್ನು ಬಳಸಬಹುದಾಗಿದೆ.

ಈ ಪಾಸ್​ಕೀ ಗಳು ಸಾಮಾನ್ಯವಾಗಿ ಇತ್ತೀಚಿನ ವರ್ಷನ್​ನಲ್ಲಿರುವ ವಿಂಡೋಸ್ 11, ಮ್ಯಾಕ್​ ಓಎಸ್​ ಹಾಗೂ ಇತರೆ ಆಂಡ್ರಾಯ್ಡ್​ ಡಿವೈಸ್​ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...