ಆಲ್ಫಾಬೆಟ್ ಇಂಕ್‌ನ ಸಿಇಓ ಸುಂದರ್ ಪಿಚೈ ಹೊಸದೊಂದು ಗೌರವಕ್ಕೆ ಪಾತ್ರರಾಗಲಿದ್ದಾರೆ. ಯಾವುದೇ ಟೆಕ್ ಕಂಪನಿಯ ಸಂಸ್ಥಾಪಕರಲ್ಲದಿದ್ದರೂ ಅವರು ನಿವ್ವಳ ಮೌಲ್ಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ಅವರ ಸಂಪತ್ತು 10 ಅಂಕಿಗಳನ್ನು ತಲುಪಲಿದೆ.
51 ವರ್ಷದ ಪಿಚೈ 2015 ರಲ್ಲಿ Googleನ CEO ಆಗಿ ನೇಮಕವಾದರು. ಅಂದಿನಿಂದ ಕಂಪನಿಯ ಷೇರುಗಳ ಬೆಲೆ 400 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಈ ಅವಧಿಯಲ್ಲಿ Googleನ ಕಾರ್ಯಕ್ಷಮತೆ ಕೂಡ ಅತ್ಯುತ್ತಮವಾಗಿದೆ.
ಕಂಪನಿಯ ಇತ್ತೀಚಿನ ಗಳಿಕೆಯ ಅಂಕಿಅಂಶಗಳು ಸಹ ಉತ್ತಮವಾಗಿವೆ. ಕ್ಲೌಡ್ ಕಂಪ್ಯೂಟಿಂಗ್ ಘಟಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಕೆ ಹೆಚ್ಚಿರುವುದೇ ಕಂಪನಿಯ ಫಲಿತಾಂಶ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಶುಕ್ರವಾರವಷ್ಟೆ ಗೂಗಲ್ ಷೇರುಗಳು ಹೊಸ ದಾಖಲೆಯನ್ನು ಮಾಡಿದೆ. ಮೊದಲ ಬಾರಿಗೆ ಲಾಭಾಂಶವನ್ನು ಘೋಷಿಸಲಾಗಿದೆ. ಗೂಗಲ್‌ನ ಷೇರುಗಳ ಏರಿಕೆ ಮತ್ತು ಸ್ಟಾಕ್ ಪ್ರಶಸ್ತಿಗಳು ಸುಂದರ್ ಪಿಚೈ ಅವರನ್ನು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕರಲ್ಲಿ ಒಬ್ಬರನ್ನಾಗಿ ಮಾಡಿವೆ.
ವರದಿಗಳ ಪ್ರಕಾರ ಸುಂದರ್ ಪಿಚೈ ಅವರ ಸಂಪತ್ತು ಸುಮಾರು 1 ಬಿಲಿಯನ್ ಡಾಲರ್‌ಗೆ ಏರಿದೆ. 2015 ರಲ್ಲಿ ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ , ಸುಂದರ್ ಪಿಚೈ ಅವರನ್ನು ಕಂಪನಿಯ ಸಿಇಓ ಆಗಿ ನೇಮಿಸಿದ್ದರು. ಬಳಿಕ ಲ್ಯಾರಿ ಪೇಜ್ ಹೊಸ ಹೋಲ್ಡಿಂಗ್ ಕಂಪನಿ ಆಲ್ಫಾಬೆಟ್‌ನ CEO ಆದರು. 2019 ರಲ್ಲಿ ಪೇಜ್ ಮತ್ತು ಇತರ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಬ್ಲೂಮ್‌ಬರ್ಗ್‌ನ ಟಾಪ್ 10 ಶ್ರೀಮಂತ ಪಟ್ಟಿಗೆ ಸೇರಿಸಲ್ಪಟ್ಟರು. ನಂತರ ಪಿಚೈ ಅವರನ್ನು ಆಲ್ಫಾಬೆಟ್‌ನ ಸಿಇಓ ಮಾಡಲಾಯ್ತು.
ಪಿಚೈ ಅವರು ಗೂಗಲ್‌ನ ಸಿಇಓ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಉತ್ಪನ್ನಗಳು ಗಮನಾರ್ಹವಾಗಿ ಸುಧಾರಿಸಿವೆ. ಗೂಗಲ್ ಅಸಿಸ್ಟೆಂಟ್, ಗೂಗಲ್ ಹೋಮ್, ಗೂಗಲ್ ಪಿಕ್ಸೆಲ್, ಗೂಗಲ್ ವರ್ಕ್‌ಸ್ಪೇಸ್ ಮುಂತಾದ ಹಲವು ಹೊಸ ವಿಷಯಗಳು ಸೇರ್ಪಡೆಯಾಗಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಕೆಯಲ್ಲಿ ಗೂಗಲ್ ಮುಂಚೂಣಿಯಲ್ಲಿದೆ.
ಸುಂದರ್ ಪಿಚೈ ಹೊರತುಪಡಿಸಿ ಇತರ ಕೆಲವು ಟೆಕ್ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆಪಲ್ ಸಿಇಓ ಟಿಮ್ ಕುಕ್, ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಇವರೆಲ್ಲ ವಿಶ್ವದ 10 ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು.