ಲಂಡನ್‌ನಲ್ಲಿ ಹೊಸದಾಗಿ ಆಫೀಸ್ ಮಾಡಿರುವ ಟೆಕ್ ದಿಗ್ಗಜ ಗೂಗಲ್, ನಗರದ ಸೆಂಟ್ರಲ್ ಸೇಂಟ್ ಜೈಲ್ಸ್ ಪ್ರದೇಶದಲ್ಲಿ $1 ಶತಕೋಟಿ ವೆಚ್ಚದಲ್ಲಿ ಈ ಜಾಗ ಖರೀದಿ ಮಾಡಿದೆ.
ಗೂಗಲ್ ಸಿಇಓ ಸುಂದರ್ ಪಿಚ್ಚೈ ಲಂಡನ್ ಆಫೀಸ್‌ನ ಡೀಲ್ ಕುರಿತು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಹೊಸ ಕಚೇರಿಯ ಚಿತ್ರಗಳನ್ನು ಹಾಕಿದ್ದು, ಇಲ್ಲಿ 10,000 ಮಂದಿ ಉದ್ಯೋಗಿಗಳು ಕೆಲಸ ಮಾಡಬಹುದಾಗಿದೆ ಎಂದಿದ್ದಾರೆ.
Breaking: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಕೊರೊನಾ
ಬ್ರಿಟನ್‌ನಲ್ಲಿ 7,000 ಉದ್ಯೋಗಿಗಳನ್ನು ಹೊಂದಿರುವ ಗೂಗಲ್ ಇತ್ತೀಚೆಗಷ್ಟೇ 700 ಹೆಚ್ಚುವರಿ ಸ್ಥಾನಗಳನ್ನು ಸೇರಿಸಿದೆ. ಲಂಡನ್‌ನ ಕೇಂದ್ರ ಭಾಗದಲ್ಲಿರುವ ಸೆಂಟ್ರಲ್ ಸೇಂಟ್ ಜೈಲ್ಸ್ ಅನ್ನು ವರ್ಣರಂಜಿತವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸಮುಚ್ಛಯದಲ್ಲಿ ರೆಸ್ಟೋರೆಂಟ್‌ಗಳು, ಕೆಫೆಗಳು, ಅಪಾರ್ಟ್ಮೆಂಟ್‌ಗಳು ಸಹ ಇವೆ.
ಈ ಹೊಸ ಖರೀದಿ ಮೂಲಕ ಗೂಗಲ್ ತನ್ನೆಲ್ಲಾ ಉದ್ಯೋಗಿಗಳನ್ನು ಮನೆಗಳಿಂದ ಮರಳಿ ಕಚೇರಿಗೆ ಕರೆಯಿಸುವ ಎಲ್ಲಾ ಲಕ್ಷಣಗಳನ್ನು ಬಿಟ್ಟುಕೊಟ್ಟಿದೆ. ಗೂಗಲ್ ಅದಾಗಲೇ ಲಂಡನ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಕಚೇರಿಗಳನ್ನು ಹೊಂದಿದ್ದು, ತನ್ನ ಬ್ರಿಟನ್ ಪ್ರಧಾನ ಕಾರ್ಯಾಲಯವನ್ನು ’ಲ್ಯಾಂಡ್‌ಸ್ಕ್ರೇಪರ್’ ಎಂಬ ಕಟ್ಟಡದಲ್ಲಿ ಹೊಂದಲು ಇಚ್ಛಿಸಿದೆ. ಇಲ್ಲಿನ ಕಿಂಗ್ಸ್ ಕ್ರಾಸ್ ರೈಲ್ವೇ ನಿಲ್ದಾಣದಲ್ಲಿ ತಲೆಯೆತ್ತಲಿರುವ ಈ ಕಾರ್ಯಾಲಯದ ನಿರ್ಮಾಣ ಕಾಮಗಾರಿ ಈ ವರ್ಷ ಕೊನೆಯಾಗುವ ಸಾಧ್ಯತೆ ಇದೆ.