ಗೂಗಲ್ ಡೇಟಿಂಗ್ ಅಪ್ಲಿಕೇಷನ್ ಬಳಸುವವರಿಗೊಂದು ಬೇಸರದ ಸುದ್ದಿಯಿದೆ. ಗೂಗಲ್ ತನ್ನ ಶುಗರ್ ಡೇಟಿಂಗ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರುತ್ತಿದೆ. ಸೆಪ್ಟೆಂಬರ್ ಒಂದರಿಂದ ಇದು ಜಾರಿಗೆ ಬರಲಿದೆ.
ಕೆಲವು ಬದಲಾವಣೆಗಳ ಮೂಲಕ ನಿಷೇಧ ಘೋಷಿಸಲಾಗಿದೆ. ಹೊಸ ನಿರ್ಬಂಧದಲ್ಲಿ ಈ ಅಪ್ಲಿಕೇಶನನ್ನು ಲೈಂಗಿಕ ವಿಷಯಕ್ಕೆ ಸೇರಿಸಲಾಗಿದೆ. ಇಷ್ಟೇ ಅಲ್ಲ, ಗೂಗಲ್ ಪ್ಲೇ ಸ್ಟೋರ್ ಸೆಟ್ ಐಯನ್ನು ಪೂರ್ವ ವೀಕ್ಷಣೆ ಮಾಡಲಾಗುತ್ತಿದೆ. ಹೊಸ ಕೌಟುಂಬಿಕ ನೀತಿ ಅವಶ್ಯಕತೆಗಳನ್ನು ಇದ್ರಲ್ಲಿ ಸೇರಿಸುತ್ತಿದೆ.
ಗೂಗಲ್, ಪ್ಲೇ ಕನ್ಸೋಲ್ ವೆಬ್‌ಸೈಟ್‌ನಲ್ಲಿ ಹೊಸ ನೀತಿ ಬದಲಾವಣೆಗಳನ್ನು ಪ್ರಕಟಿಸಿದೆ. ಗೂಗಲ್ ನಲ್ಲಾಗಲಿರುವ ಹಲವಾರು ನೀತಿ ಬದಲಾವಣೆಗಳನ್ನು ಉಲ್ಲೇಖಿಸಲಾಗಿದೆ. ಇದ್ರಲ್ಲಿ ಶುಗರ್ ಡೇಟಿಂಗ್ ನಿರ್ವಹಿಸುವ ಅಪ್ಲಿಕೇಶನ್‌ಗಳ ಮೇಲಿನ ನಿಷೇಧ ಹೇರಲಾಗಿದೆ ಎಂಬುದನ್ನು ತಿಳಿಸಲಾಗಿದೆ. ಗೂಗಲ್ ಈ ಆಪ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಶುಗರ್ ಡೇಟಿಂಗ್ ಎನ್ನುವುದು ವಯಸ್ಸಾದವರು ಕಿರಿಯ ಜನರೊಂದಿಗೆ ಡೇಟಿಂಗ್ ಮಾಡುವ ಒಂದು ಅಪ್ಲಿಕೇಶನ್ ಆಗಿದೆ. ವೃದ್ಧರು ಒಂಟಿತನವನ್ನು ಹೋಗಲಾಡಿಸಲು ಈ ಆಪ್‌ಗಳನ್ನು ಬಳಸುತ್ತಾರೆ. ಸೆಪ್ಟೆಂಬರ್ ಒಂದರಿಂದ ಇದು ಕೆಲಸ ಮಾಡುವುದಿಲ್ಲ. ಹಾಗೆ ಗೂಗಲ್ ನಲ್ಲಿ ಕೆಲವೊಂದು ಬದಲಾವಣೆ ನಡೆಯಲಿದೆ.