ಭಾರತದಲ್ಲಿ ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಫೇಸ್ಬುಕ್, ಶಿಯೋಮಿ ಕೋರ್ಪ್, ಅಮೆಜಾನ್ ಮತ್ತು ಗೂಗಲ್ ಕೂಡ ಡಿಜಿಟಲ್ ಸಾಲ ಮಾರುಕಟ್ಟೆ ಪ್ರವೇಶ ಮಾಡಲು ತಯಾರಿ ನಡೆಸಿದೆ.
2024 ರ ವೇಳೆಗೆ ದೇಶದ ಡಿಜಿಟಲ್ ಸಾಲ ಉದ್ಯಮ, 10 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಈ ಎಲ್ಲಾ ಕಂಪನಿಗಳು ಈಗಾಗಲೇ ತಮ್ಮ ಪ್ಲಾನ್ ಘೋಷಿಸಿವೆ. ಭಾರತದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಟೆಕ್ ಕಂಪನಿಗಳು ಡಿಜಿಟಲ್ ಪಾವತಿ ಮಾರುಕಟ್ಟೆಯತ್ತ ಗಮನ ಹರಿಸುತ್ತಿವೆ.
ಒಂದು ವರದಿಯ ಪ್ರಕಾರ, ಡಿಜಿಟಲ್ ಸಾಲವು 2023 ರ ವೇಳೆಗೆ 350 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಸಣ್ಣ ವ್ಯಾಪಾರ ಸಾಲದ ಅಡಿಯಲ್ಲಿ 5 ರಿಂದ 50 ಲಕ್ಷದವರೆಗಿನ ಸಾಲವನ್ನು ನೀಡುವುದಾಗಿ ಫೇಸ್ಬುಕ್ ಹೇಳಿದೆ. ಬಡ್ಡಿದರವನ್ನು ವರ್ಷಕ್ಕೆ ಶೇಕಡಾ 17 ರಿಂದ 20ರಷ್ಟು ನಿಗದಿಪಡಿಸಲಾಗಿದೆ.
ಗೂಗಲ್ ಈಗಾಗಲೇ ಟೈಮ್ ಡಿಪಾಸಿಟ್ಸ್ ಸ್ಮಾಲ್ ಲೆಂಡರ್‌ಗಳ ಜೊತೆ ಪಾಲುದಾರಿಕೆ ಹೊಂದಿದೆ. ಶಿಯೋಮಿ, ಕ್ರೆಡಿಟ್ ಕಾರ್ಡ್ ಮತ್ತು ವಿಮಾ ಉತ್ಪನ್ನಗಳನ್ನು ನೀಡುವ ಪ್ಲಾನ್ ನಲ್ಲಿದೆ. ಅಮೆಜಾನ್ ಇತ್ತೀಚೆಗೆ, ಸ್ಮಾಲ್‌ಕೇಸ್ ಟೆಕ್ನಾಲಜೀಸ್‌ನಲ್ಲಿ ಹೂಡಿಕೆ ಮಾಡಿದೆ.