
ನೀವು ಗೂಗಲ್ ಫೋಟೋಗಳಿಂದ ಫೋಟೋವನ್ನು ಡಿಲೀಟ್ ಮಾಡಿದಾಗ ಅದು ಸ್ವಯಂಚಾಲಿತವಾಗಿ ಟ್ರಾಶ್ (thrash) ಫೋಲ್ಡರ್ಗೆ ಹೋಗುತ್ತದೆ. ಬ್ಯಾಕಪ್ ಮಾಡಲಾದ ಡೀಲೀಟೆಡ್ ಫೋಟೋಗಳು 60 ದಿನಗಳವರೆಗೆ ಇಲ್ಲಿ ಉಳಿಯುತ್ತವೆ, ಆದರೆ ಬ್ಯಾಕಪ್ ಇಲ್ಲದ ಫೋಟೋಗಳು 30 ದಿನಗಳವರೆಗೆ ಇರುತ್ತದೆ.
ಫೋಟೋಗಳು ಮತ್ತು ವೀಡಿಯೊಗಳು ನಿಮ್ಮ thrash ಫೋಲ್ಡರ್ನಲ್ಲಿದ್ದರೆ ಮಾತ್ರ ನೀವು ಅವುಗಳನ್ನು ಮರುಸ್ಥಾಪಿಸಬಹುದು. ಒಮ್ಮೆ ನೀವು ಈ ಫೋಲ್ಡರ್ ಅನ್ನು ಖಾಲಿ (empty) ಮಾಡಿದರೆ ಅವುಗಳನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ.
ಅಲ್ಲದೆ ಗೂಗಲ್ ಸಪೋರ್ಟ್ ಪ್ರಕಾರ, ನೀವು 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಗೂಗಲ್ ಫೋಟೋಗಳಲ್ಲಿ ಸಕ್ರಿಯವಾಗಿಲ್ಲದಿದ್ದರೆ, ಡಿಲೀಟೆಡ್ ಫೋಟೋಗಳನ್ನು ಮರಳಿ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಿಮ್ಮ ಫೋಟೋ/ವಿಡಿಯೋಗಳು ಡಿಲೀಟ್ ಆಗಿರುತ್ತವೆ. ಅದೇ ರೀತಿ ನೀವು 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಮ್ಮ ಸಂಗ್ರಹಣೆಯ ಮಿತಿಯನ್ನು ಮೀರಿದ್ದರೆ, ನಂತರ ಫೋಟೋಗಳನ್ನು ಒಳಗೊಂಡಂತೆ ನಿಮ್ಮ ಎಲ್ಲಾ ಕಂಟೆಂಟ್ ಅನ್ನು ಡಿಲೀಟ್ ಮಾಡಲಾಗುತ್ತದೆ .
ಡಿಲೀಟೆಡ್ ಫೋಟೋಗಳನ್ನು ಮರಳಿ ಪಡೆಯುವುದು ಹೇಗೆ ?
Thrash ಫೋಲ್ಡರ್ ಪರಿಶೀಲಿಸಿ-
ಈ ಫೋಲ್ಡರ್ನಲ್ಲಿರುವ ಡಿಲೀಟೆಡ್ ಫೋಟೋಗಳನ್ನು ಮರುಸ್ಥಾಪಿಸಲು, ನೀವು ಮರಳಿ ಪಡೆಯಲು ಬಯಸುವ ಫೋಟೋವನ್ನು ಹುಡುಕಿ. ಇದನ್ನು ಮಾಡಲು ‘ರಿಸ್ಟೋರ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಫೋಟೋವನ್ನು ನಿಮ್ಮ ಫೋನ್ ಗ್ಯಾಲರಿ ಅಥವಾ ಗೂಗಲ್ ಫೋಟೋ ಲೈಬ್ರರಿಗೆ ಮರುಸ್ಥಾಪಿಸಲಾಗುತ್ತದೆ.
ಆರ್ಕೈವ್ ಫೋಲ್ಡರ್ ಸಹಾಯದಿಂದ-
ಕೆಲವೊಮ್ಮೆ ಜನರು ಆಕಸ್ಮಿಕವಾಗಿ ತಮ್ಮ ಫೋಟೋಗಳನ್ನು ಆರ್ಕೈವ್ ಮಾಡುತ್ತಾರೆ ಮತ್ತು ಅವರು ಅವುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಭಾವಿಸುತ್ತಾರೆ. ಕಳೆದುಹೋದ ಫೋಟೋಗಳಿಗಾಗಿ ಆರ್ಕೈವ್ ಫೋಲ್ಡರ್ ಅನ್ನು ಪರಿಶೀಲಿಸುವುದು ಕೂಡ ಸಹಾಯಕವಾಗಬಹುದು. ಆರ್ಕೈವ್ ಫೋಲ್ಡರ್ನಲ್ಲಿ ನಿಮ್ಮ ಕಳೆದುಹೋದ ಫೋಟೋಗಳನ್ನು ನೀವು ಕಂಡುಕೊಂಡರೆ, ‘ಅನ್ಆರ್ಕೈವ್’ ಆಯ್ಕೆಯನ್ನು ಆರಿಸಿ, ಆಗ ಫೋಟೋವನ್ನು ಗ್ಯಾಲರಿಗೆ ಮರುಸ್ಥಾಪಿಸಲಾಗುತ್ತದೆ.
ಗೂಗಲ್ ಸಪೋರ್ಟ್ –
ನಿಮ್ಮ ಡಿಲೀಟೆಡ್ ಫೋಟೋಗಳನ್ನು ನೀವು ಗೂಗಲ್ ಡ್ರೈವ್ನಲ್ಲಿ ಸಂಗ್ರಹಿಸಿದ್ದರೆ, ನಂತರ ನೀವು ಅವುಗಳನ್ನು ಮರಳಿ ಪಡೆಯಲು ಗೂಗಲ್ ಗೆ ವಿನಂತಿಸಬಹುದು.
– ಗೂಗಲ್ ಡ್ರೈವ್ಗೆ ಹೋಗಿ ಮತ್ತು ಸಹಾಯ (help) ಪುಟದ ಮೇಲೆ ಕ್ಲಿಕ್ ಮಾಡಿ. ಸಹಾಯ ಪುಟದಿಂದ ‘ಮಿಸ್ಸಿಂಗ್ ಅಥವಾ ಡಿಲೀಟೆಡ್ ಫೈಲ್ಸ್’ ಅನ್ನು ಕ್ಲಿಕ್ ಮಾಡಿ.
– ಈಗ ನೀವು ಪಾಪ್ ಅಪ್ ಬಾಕ್ಸ್ ನಲ್ಲಿ ಎರಡು ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲ ಆಯ್ಕೆಯು ‘ವಿನಂತಿ ಚಾಟ್’ ( request chat) ಆಗಿರುತ್ತದೆ ಮತ್ತು ಎರಡನೆಯದು ‘ಇಮೇಲ್ ಬೆಂಬಲ’ ( e mail support) ಆಗಿರುತ್ತದೆ. ನಿಮಗೆ ಸೂಕ್ತವಾದದನ್ನು ನೀವು ಆಯ್ಕೆ ಮಾಡಬಹುದು.
– ಫೋಟೋಗಳು/ಫೈಲ್ಗಳನ್ನು ಮರುಸ್ಥಾಪಿಸಲು ನಿಮಗೆ ಗೂಗಲ್ ಏಕೆ ಬೇಕು ಎಂಬುದನ್ನು ವಿವರಿಸಿ. ಇದು ಸಾಧ್ಯವಾದರೆ ಡಿಲೀಟೆಡ್ ಫೋಟೋಗಳು ಅಥವಾ ಫೈಲ್ಗಳನ್ನು ಗೂಗಲ್ ಮರುಪಡೆಯಬಹುದು.