
ಹೈದರಾಬಾದ್: ಗಾಜಿಯಾಬಾದ್ ನಿಂದ ಕಾಜಿಪೇಟೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಹಳಿತಪ್ಪಿದ ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ.
ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 11 ಬೋಗಿಗಳು ಹಳಿತಪ್ಪಿವೆ. ಪೆದ್ದಪಲ್ಲಿ ಜಿಲ್ಲೆಯ ರಾಘವಪುರ ಹಾಗೂ ಕನ್ನಾಲ್ ನಡುವೆ ಈ ಘಟನೆ ನಡೆದಿದೆ.
ಅಪಘಾತದ ಬಳಿಕ ರೈಲು ಸ್ಥಗಿತಗೊಂದ ಪರಿಣಾಮ ದೆಹಲಿ ಮತ್ತು ಚೆನ್ನೈ ನಡಿವಿನ ಸಂಚಾರಕ್ಕೆ ಸಮಸ್ಯೆಯಾಯಿತು. ದೆಹಲಿ-ಚೆನ್ನೈ ಮುಖ್ಯ ರೈಲು ಮರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂದಿದೆ.
ಗುಡ್ಸ್ ರೈಲು ಹಳಿ ತಪ್ಪಿರುವ ಪರಿಣಾಮ ಈ ಮಾರ್ಗದಲ್ಲಿ ಸಾಗುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳು, ಪ್ಯಾಸೆಂಜರ್ ರೈಲುಗಳು ಹಾಗೂ ಇತರ ಸರಕು ಸಗಾಣೆ ರೈಲುಗಳು ಮಾರ್ಗಮಧ್ಯೆ ನಿಲ್ಲುವಂತಾಗಿದೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲ ರೈಲುಗಳು ವಿಳಂಬವಾಗಿವೆ. ಮಾಹಿತಿ ಪ್ರಕಾರ 20 ರೈಲುಗಳ ದ್ಸಂಚಾರ ತಾತ್ಕಲೈಕ ರದ್ದಾಗಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.