
ರಾಯಚೂರು: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಕಾಲುಗೆ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ದೇವದುರ್ಗದ ಆರ್ ಬಿಸಿ ಕಾಲುಯೆಯಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕರನ್ನು ಕರೆದಿಯ್ಯುತ್ತಿದ್ದ ಗೂಡ್ಸ್ ಆಟೋ ಏಕಾಏಕಿ ಚಾಲಕನ ನಿಯಂತ್ರ ತಪ್ಪಿ, ತುಂಬಿ ಹರಿಯುತ್ತಿದ್ದ ಕಾಲುಗೆ ಬಿದ್ದಿದೆ.
ಆಟೋ ಚಾಲಕ ಹಾಗೂ 10 ಕಾರ್ಮಿಕರು ಕಾಲುವೆಯಿಂದ ಹೊರಬರಲು ಪರದಾಟ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಗ್ಗದ ಸಹಾಯದಿಂದ ಕಾರ್ಮಿಕರನ್ನು ಹಾಗೂ ಚಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಹಗ್ಗಕಟ್ಟಿ ಆಟೋವನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.