ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಮೆಟ್ರೋ ರೈಲು ಸಂಚಾರದಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದಷ್ಟು ಮುಕ್ತಿ ಸಿಕ್ಕಿದೆ. ಇದರ ಮಧ್ಯೆ ಮೆಟ್ರೋ ಕುರಿತು ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ.
ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿಲೋಮೀಟರ್ ಮೆಟ್ರೋ ನೇರಳೆ ಮಾರ್ಗದ ಉದ್ಘಾಟನೆ ಇಂದು ನೆರವೇರಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಪಶ್ಚಿಮ ವಿಸ್ತರಣೆಯು ಮೈಸೂರು ರಸ್ತೆಯಿಂದ ಕೆಂಗೇರಿ ಉಪ ನಗರದವರೆಗೆ ನೂತನ ಅಭಿವೃದ್ಧಿಗೆ ಅವಕಾಶ ಸೃಷ್ಟಿಸಲಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಆರ್.ವಿ. ಇಂಜಿನಿಯರಿಂಗ್ ಕಾಲೇಜ್ ನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಿದೆ.