![](https://kannadadunia.com/wp-content/uploads/2022/12/new-year-758x455-1.jpg)
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 2024 ಹೊಸ ವರ್ಷಕ್ಕೆ ಜನರು ಭರ್ಜರಿ ಸ್ವಾಗತ ಕೋರಿದ್ದು, ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಭರಮಾಡಿಕೊಂಡಿದ್ದಾರೆ.
ಬೆಂಗಳೂರಿನ ಎಂ.ಜಿ .ರೋಡ್. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರೋಡ್, ಚರ್ಚ್ ಸ್ಟೀಟ್ ಸೇರಿದಂತೆ ರಾಜ್ಯದ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಬಳ್ಳಾರಿ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ನಗರಗಳಿ ಡಿಜೆ. ಹಾಲಿವುಡ್, ಬಾಲಿವುಡ್, ಪಂಜಾಬಿ, ಕನ್ನಡ, ತಮಿಳು ಹಾಡುಗಳನ್ನು ಹಾಕಲಾಗಿತ್ತು. ಬೆಲ್ಲಿ ಡ್ಯಾನ್ಸ್ ಸೇರಿ ಮನರಂಜನೆ ಭರಪೂರವಾಗಿತ್ತು. ಡಿಜೆ ಸದ್ದಿಗೆ ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಹೊಸ ವರ್ಷದ ಮೊದಲ ಹಿನ್ನೆಲೆಯಲ್ಲಿ ಇಂದು ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಜನರು ಲಗ್ಗೆ ಇಡಲಿದ್ದಾರೆ. ಹೊಸ ವರ್ಷದ ಕೈಗೊಳ್ಳಲಿರುವ ಕೆಲಸ ಕಾರ್ಯಗಳು ಯಾವುದೇ ತೊಡಕಿಲ್ಲದೆ ನಡೆಯಲಿ ಎಂದು ಪ್ರಾರ್ಥಿಸಲಿದ್ದಾರೆ. ಇದಕ್ಕಾಗಿ ದೇವಾಲಯಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.