ಬೆಂಗಳೂರು : ರಾಜ್ಯದ ಮೀನುಗಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮೋಟಾರ್ ಮೋಟಾರ್ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೀಮೆ ಎಣ್ಣೆ ಯಂತ್ರದಿಂದ ಪೆಟ್ರೋಲ್ ಯಂತ್ರಕ್ಕೆ ಬದಲಾಗುವ ಮೀನುಗಾರರಿಗೆ ರಾಜ್ಯ ಸರಕಾರ 50 ಸಾವಿರ ರೂ. ಸಬ್ಸಿಡಿ ಘೋಷಣೆ ಮಾಡಿದ್ದು, ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲಿದೆ. ಮೀನುಗಾರರಿಗೆ ಡೀಸೆಲ್ ಕೊಡುವ ರೀತಿ, ಸಬ್ಸಿಡಿ ದರದಲ್ಲಿ ಪೆಟ್ರೋಲ್ ಕೂಡ ಕೊಡಬೇಕು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಅದೇ ರೀತಿ ಸೀಮೆ ಎಣ್ಣೆಯಿಂದ ಪೆಟ್ರೋಲ್ ಯಂತ್ರಕ್ಕೆ ಬದಲಾಯಿಸುವ ಮೀನುಗಾರರಿಗೆ 50 ಸಾವಿರ ಸಬ್ಸಿಡಿ ಕೊಟ್ಟೇ ನೀಡುತ್ತೇವೆ, ಜೊತೆಗೆ ಮೀನುಗಾರರಿಗೆ ಮೀನುಗಾರಿಕೆ ಉದ್ದೇಶಕ್ಕೆ ಪೆಟ್ರೋಲ್ ಕೂಡ ಸಬ್ಸಿಡಿ ದರದಲ್ಲಿ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.