ಬೆಂಗಳೂರು : ರಾಜ್ಯ ಸರ್ಕಾರ ಹೊಸದಾಗಿ 185 ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
2013 ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಡಿಮೆ ದರದಲ್ಲಿ ಜನರಿಗೆ ಊಟ ಮತ್ತು ಉಪಹಾರ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದ 31 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 165 ಹಾಗೂ 10 ಮಹಾನಗರ ಪಾಲಿಕೆಗಳ 20 ಕಡೆಗಳಲ್ಲಿ ಮುಂಬರುವ ದಿನಗಳಲ್ಲಿ ಅಡುಗೆ ಸಹಿತ ಕ್ಯಾಂಟೀನ್‌ಗಳು ಶುರುವಾಗಲಿವೆ. ಇದಕ್ಕಾಗಿ ಸರ್ಕಾರ 154 ಕೋಟಿ ಅನುದಾನ ನೀಡಿದೆ.
ಅಲ್ಲದೇ ಸರ್ಕಾರ ಕ್ಯಾಂಟೀನ್ ಬಿಲ್ಗಳ ಡಿಜಿಟಲೀಕರಣಕ್ಕೆ ಕೂಡ ಮುಂದಾಗಿದ್ದು, ಈ ಮೂಲಕ ಕ್ಯಾಂಟೀನ್ ಊಟದ ವ್ಯವಹಾರದಲ್ಲಿ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ.