ತುಮಕೂರು – ಬೆಂಗಳೂರಿನ ನಡುವೆ ಎರಡು ಹೊಸ ಮೆಮು ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೆಪ್ಟೆಂಬರ್ 27ರಂದು ತುಮಕೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.
ತುಮಕೂರು -ಯಶವಂತಪುರ ನಡುವೆ ಮೆಮು ರೈಲು ಸಂಚರಿಸಲಿದೆ. ಭಾನುವಾರ ಹೊರತುಪಡಿಸಿ ಪ್ರತಿದಿನ ತುಮಕೂರಿನಿಂದ ಬೆಳಗ್ಗೆ 8:45ಕ್ಕೆ ಹೊರಟು 10:25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 5:40ಕ್ಕೆ ಯಶವಂತಪುರದಿಂದ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ.
ಸಂಜೆ ವೇಳೆ ಅರಸೀಕೆರೆ ಪ್ಯಾಸೆಂಜರ್ ಗಿಂತ ಮೊದಲು ಇನ್ನೊಂದು ರೈಲು ಸಂಚಾರ ಆರಂಭಿಸಬೇಕೆಂಬ ಪ್ರಯಾಣಿಕರ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿದ್ದಾರೆ. ಪ್ರತಿ ಸೋಮವಾರ ಬಾಣಸವಾಡಿಯಿಂದ ಬೆಳಗ್ಗೆ 6.15ಕ್ಕೆ ಮತ್ತೊಂದು ಮೆಮು ರೈಲು ಸಂಚರಿಸಲಿದೆ. ಯಶವಂತಪುರ ಬೈಪಾಸ್ ಮಾಡಿ ಚಿಕ್ಕಬಾಣಾವರ ಮೂಲಕ ಬೆಳಗ್ಗೆ 8:35ಕ್ಕೆ ತುಮಕೂರು ತಲುಪಲಿದೆ. ಪ್ರತಿ ಶನಿವಾರ ರಾತ್ರಿ 7:40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.5ಕ್ಕೆ ಬಾಣಸವಾಡಿ ತಲುಪಲಿದೆ ಎಂದು ಹೇಳಲಾಗಿದೆ.