ಬೆಂಗಳೂರು : ರೈತ ಸಮುದಾಯ, ಹಾಲು ಉತ್ಪಾದಕರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಜಾನುವಾರುಗಳ ಆರೈಕೆಗೆ ಇನ್ಮುಂದೆ ಮನೆ ಬಾಗಿಲಿಗೆ ಪಶು ಸಖಿಯರು ಬರಲಿದ್ದಾರೆ.
ಹೌದು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರ ರೀತಿಯಲ್ಲೇ ಪಶುಸಂಗೋಪನೆ ಇಲಾಖೆಯಲ್ಲಿ 5,962 ‘ಪಶು ಸಖಿ’ಯರನ್ನು ನೇಮಿಸಲಾಗಿದೆ. ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನಂತರ, ಜಾನುವಾರುಗಳ ವೈಜ್ಞಾನಿಕ ಸಾಕಣೆ ಹಾಗೂ ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ 16 ದಿನಗಳ ತರಬೇತಿ ಕೊಡಲಾಗುತ್ತದೆ. ಬಳಿಕ ಕೆಲಸಕ್ಕೆ ನಿಯೋಜಿಸಲಾಗುತ್ತದೆ.
ಗ್ರಾಮೀಣ ರೈತ ಮಹಿಳೆಯರಿಗೆ ಪಶು ಸಂಗೋಪನಾ ಚಟುವಟಿಕೆಗಳ ಸಮಗ್ರ ಮಾಹಿತಿ ಕೊಡಿಸುವುದು ಪಶು ಸಖಿ ಯೋಜನೆ ಉದ್ದೇಶವಾಗಿದೆ. ಪಶು ವೈದ್ಯರ ಮಾರ್ಗದರ್ಶನದಲ್ಲಿ ಸಖಿಯರು ಕೆಲಸ ಮಾಡಲಿದ್ದಾರೆ.