alex Certify ಪಕ್ಷಿ ಪ್ರಿಯರಿಗೆ ಗುಡ್​ ನ್ಯೂಸ್​..! ರಾಷ್ಟ್ರ ರಾಜಧಾನಿ ಮೃಗಾಲಯಕ್ಕೆ ವಲಸೆ ಬಂದ ವಿಶೇಷ ಅತಿಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿ ಪ್ರಿಯರಿಗೆ ಗುಡ್​ ನ್ಯೂಸ್​..! ರಾಷ್ಟ್ರ ರಾಜಧಾನಿ ಮೃಗಾಲಯಕ್ಕೆ ವಲಸೆ ಬಂದ ವಿಶೇಷ ಅತಿಥಿಗಳು

ಸುಮಾರು 140ಕ್ಕೂ ಅಧಿಕ ಬಣ್ಣದ ಕೊಕ್ಕರೆಗಳು ದೆಹಲಿ ಮೃಗಾಲಯಕ್ಕೆ ವಲಸೆ ಬಂದಿವೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಹಕ್ಕಿಗಳು ಸಾಮಾನ್ಯವಾಗಿ ಮಧ್ಯ ಆಗಸ್ಟ್​ ತಿಂಗಳಲ್ಲಿ ಪಶ್ಚಿಮ ಭಾಗಗಳಿಂದ ರಾಷ್ಟ್ರ ರಾಜಧಾನಿಗೆ ವಲಸೆ ಬರುತ್ತದೆ. ಆದರೆ ಈ ಬಾರಿ ಈ ಹಕ್ಕಿಗಳು ಬೇಗನೇ ದೆಹಲಿಗೆ ವಲಸೆ ಬಂದಿವೆ.‌

ಆಗಸ್ಟ್​ 6ರಂದು ದೆಹಲಿಯಲ್ಲಿ ಮೊದಲ ಬಾರಿಗೆ ಬಣ್ಣದ ಕೊಕ್ಕರೆಗಳು ಕಾಣಿಸಿಕೊಂಡಿದ್ದವು. ದೆಹಲಿ ಮೃಗಾಲಯ ನಿರ್ದೇಶಕ ರಮೇಶ್​ ಕುಮಾರ್ ಪಾಂಡೆ ನೀಡಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಈ ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವ ಕೆಲವೇ ಪ್ರದೇಶಗಳಲ್ಲಿ ಈ ಮೃಗಾಲಯ ಕೂಡ ಒಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್​ ತಿಂಗಳ ಕೊನೆಯವರೆಗೆ ಈ ಹಕ್ಕಿಗಳ ಸಂಖ್ಯೆಯು 500 ದಾಟುವ ಸಾಧ್ಯತೆ ಇದೆ. ಈ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿ ಪ್ರಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೃಗಾಲಯದಲ್ಲಿ ಪಕ್ಷಿ ಪ್ರವಾಸವನ್ನು ಆಯೋಜಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮೃಗಾಲಯಕ್ಕೆ ಸಂದರ್ಶಕರ ಭೇಟಿಯನ್ನು ನಿಲ್ಲಿಸಿದ ದಿನ ಈ ಪಕ್ಷಿ  ವೀಕ್ಷಣೆ ಪ್ರವಾಸವನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ 20 ಪಕ್ಷಿ ಪ್ರಿಯರ ಗುಂಪನ್ನು ರಚಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.

ಈ ಬಣ್ಣದ ಕೊಕ್ಕರೆಗಳು ಆಗಸ್ಟ್​ನಿಂದ ಅಕ್ಟೋಬರ್​ ತಿಂಗಳವರೆಗೂ ದೆಹಲಿಗೆ ವಲಸೆ ಬರುತ್ತವೆ ಹಾಗೂ ಸಂತಾನೋತ್ಪತ್ತಿಗಾಗಿ ಮಾರ್ಚ್ ತಿಂಗಳವರೆಗೂ ಇಲ್ಲೇ ನೆಲೆಸುತ್ತವೆ. ಪಕ್ಷಿ ವೀಕ್ಷಣೆ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ಹಾಗೂ ಪಕ್ಷಿ ಪ್ರಿಯರಿಗೆ ನಿಜಕ್ಕೂ ಪ್ರಯೋಜನವಿದೆ. ಅಲ್ಲದೇ ಮೃಗಾಲಯಕ್ಕೂ ಇದರಿಂದ ಜನಪ್ರಿಯತೆ ಸಿಗುತ್ತದೆ ಎಂದು ಪಾಂಡೆ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...