ಮಾರುತಿ ಸುಜುಕಿ ಇಂಡಿಯಾ ವ್ಯಾನ್ ಇಕೋದ ಆಂಬುಲೆನ್ಸ್ ಆವೃತ್ತಿಯ ಬೆಲೆಯಲ್ಲಿ 88 ಸಾವಿರ ರೂಪಾಯಿ ಕಡಿತಗೊಳಿಸಿದ ಬಳಿಕ 6,16,875 ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಹೇಳಿದೆ.
ಇಕೋ ಆಂಬುಲೆನ್ಸ್ಗೆ ಈ ಹಿಂದೆ ಇದ್ದ 28 ಪ್ರತಿಶತ ಜಿಎಸ್ಟಿ ದರವು 12 ಪ್ರತಿಶತಕ್ಕೆ ಇಳಿಕೆಯಾದ ಪರಿಣಾಮ ಬೆಲೆಯಲ್ಲಿ ಈ ಬದಲಾವಣೆ ಆಗಿದೆ ಎನ್ನಲಾಗಿದೆ. ಅಂದಹಾಗೆ ಇಕೊ ಆಂಬುಲೆನ್ಸ್ನ ಎಕ್ಸ್ ಶೋ ರೂಂ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ದೆಹಲಿಯಲ್ಲಿ ನವೀಕೃತ ಬೆಲೆಯು 6,18,875 ರೂಪಾಯಿ ಆಗಿದೆ ಎಂದು ಮಾರುತಿ ಸುಜುಕಿ ಕಂಪನಿಯು ಮಾಹಿತಿ ನೀಡಿದೆ.
ಕೇಂದ್ರ ಹಣಕಾಸು ಸಚಿವಾಲಯ ಕೋವಿಡ್ ಸಂಬಂಧಿ ಸಲಕರಣೆಗಳಾದ ಹ್ಯಾಂಡ್ ಸ್ಯಾನಿಟೈಸರ್, ಆಕ್ಸಿಮೀಟರ್, ಬಿಪಾಪ್ ಮಷಿನ್, ಟೆಸ್ಟಿಂಗ್ ಕಿಟ್, ಆಂಬುಲೆನ್ಸ್ ಸೇರಿದಂತೆ ವಿವಿಧ ವೈದ್ಯಕೀಯ ಸಲಕರಣೆಗಳ ಜಿಎಸ್ಟಿ ಪ್ರಮಾಣವನ್ನ ಇಳಿಕೆ ಮಾಡಿದ ಬಳಿಕ ಆಂಬುಲೆನ್ಸ್ ದರ ಇಳಿಕೆಯಾಗಿದೆ.