2020 ರಲ್ಲಿ ಕೊರೊನಾ ವೈರಸ್ ಹರಡಿದ ನಂತರ, ಪ್ರಪಂಚದಾದ್ಯಂತ ಕೆಲಸ ಮಾಡುವ ವಿಧಾನ ಬದಲಾಗಿದೆ. ಅನೇಕ ಕಚೇರಿಗಳು ವರ್ಕ್ ಫ್ರಂ ಹೋಮ್ ನೀಡಿವೆ.
ಮನೆಯಿಂದ ಕೆಲಸ ಮಾಡುತ್ತಿರುವ ಜನರು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವ ಜನರಿಗೆ ಸರಿಯಾಗಿ ರಜೆ ಸಿಗ್ತಿಲ್ಲ.
ಮನೆಯಲ್ಲಿರುವ ಕಾರಣ, ಅನೇಕ ಕಂಪನಿಗಳು ರಜಾ ದಿನಗಳಲ್ಲಿಯೂ ಉದ್ಯೋಗಿಗಳಿಗೆ ಕೆಲಸ ನೀಡ್ತಿವೆ. ಆದ್ರೆ ಮೀಶೋ ಆಪ್ ತನ್ನ ಉದ್ಯೋಗಿಗಳಿಗೆ ರಜೆ ಅವಕಾಶ ನೀಡ್ತಿದೆ.
ಮೀಶೋ ಭಾರತೀಯ ಮೂಲದ ಸಾಮಾಜಿಕ ವಾಣಿಜ್ಯ ವೇದಿಕೆಯಾಗಿದೆ. ಇದನ್ನು ಡಿಸೆಂಬರ್ 2015 ರಲ್ಲಿ ಐಐಟಿ ದೆಹಲಿ ಪದವೀಧರರಾದ ವಿದಿತ್ ಆತ್ರೆ ಮತ್ತು ಸಂಜೀವ್ ಬಾರನ್ವಾಲ್ ಸ್ಥಾಪಿಸಿದರು. ಮೀಶೋ ಭಾರತದ ಮೊದಲ ಸ್ಟಾರ್ಟ್ಅಪ್ ಆಗಿದ್ದು, ಇದರಲ್ಲಿ ಫೇಸ್‌ಬುಕ್ ಕೂಡ ಹೂಡಿಕೆ ಮಾಡಿದೆ.
ಮೀಶೋ, ಈ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಉದ್ಯೋಗಿಗಳ ಮಾನಸಿಕ ನೆಮ್ಮದಿ ನೀಡಲು ಕಂಪನಿಯು ನವೆಂಬರ್‌ನಲ್ಲಿ 10 ದಿನಗಳ ವಿರಾಮ ನೀಡಲು ನಿರ್ಧರಿಸಿದೆ. ನವೆಂಬರ್ 4 ರಿಂದ ನವೆಂಬರ್ 14 ರವರೆಗೆ ಈ ಕಂಪನಿಯಲ್ಲಿ ಯಾವುದೇ ರೀತಿಯ ವ್ಯಾಪಾರ ಇರುವುದಿಲ್ಲ. ಹಬ್ಬದ ಋತುವಿನ ಮಾರಾಟದ ನಂತರ, ಎಲ್ಲಾ ಉದ್ಯೋಗಿಗಳಿಗೆ 10 ದಿನಗಳ ರಜೆ ನೀಡಲಾಗುತ್ತದೆ. ಇದು ಉದ್ಯೋಗಿಗಳ ಮಾನಸಿಕ ಸ್ಥಿತಿಯನ್ನು ಸುಧಾರಿಸಲಿದ್ದು, ಮತ್ತೆ ಕೆಲಸ ಮಾಡುವ ಉತ್ಸಾಹವನ್ನು ಅವರಿಗೆ ನೀಡಲಿದೆ.
10 ದಿನಗಳ ನಂತರ, ಉದ್ಯೋಗಿಗಳಿಗೆ ವಾರದ ರಜೆ ಅಥವಾ ಹಬ್ಬಗಳಲ್ಲಿ ಮಾತ್ರ ರಜೆ ಸಿಗುವುದಿಲ್ಲ. ಮೀಶೋದಲ್ಲಿ ಕೆಲಸ ಮಾಡುವ ಜನರಿಗೆ 64 ಐಚ್ಛಿಕ ರಜಾದಿನಗಳ ಕ್ಯಾಲೆಂಡರ್ ನೀಡಲಾಗಿದೆ. ಇದು ಮಹಿಳಾ ದಿನ, ಪುಸ್ತಕ ಪ್ರೇಮಿಗಳ ದಿನ ಮತ್ತು ಪ್ರೇಮಿಗಳ ದಿನದಂತಹ ವಿಶೇಷ ದಿನಗಳನ್ನು ಒಳಗೊಂಡಿದೆ.