ಬೆಂಗಳೂರು : ವನ್ಯಜೀವಿ’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ ‘ಕಠಿಣ ಕೆಲಸದ ಭತ್ಯೆ’ ಮಂಜೂರು ಮಾಡಿದೆ.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಗಳ ಮುಂಚೂಣಿ ಸಿಬ್ಬಂದಿಗೆ ಹುದ್ದೆಯನುಸಾರ ಮಾಸಿಕ ₹2,000 ದಿಂದ ₹3,500ರ ವರೆಗೆ ‘ಕಠಿಣ ಕೆಲಸದ ಭತ್ಯೆ’ಯನ್ನು ಮಂಜೂರು ಮಾಡಲಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಆರ್ಎಫ್ಒ, ಎಆರ್ಎಫ್ಒಗೆ ₹3,500, ಅರಣ್ಯ ರಕ್ಷಕರಿಗೆ ₹2,700 ಮತ್ತು ಡಿ ದರ್ಜೆ ನೌಕರರಿಗೆ ₹2,000 ಭತ್ಯೆ ನೀಡಲಾಗುತ್ತದೆ. ಆನೆ ಕಾರ್ಯಪಡೆ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಕೆಲಸದ ದಿನಗಳ ಆಧಾರದಲ್ಲಿ ತಿಂಗಳಿಗೆ ಗರಿಷ್ಠ ₹2,000 ಭತ್ಯೆ ನೀಡಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.