ಶಿವಮೊಗ್ಗ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನರಿಗೆ ಪೂರಕವಾದ ಉದ್ಯೋಗಗಳ ಒದಗಿಸಲು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಂದ ಸ್ವಾವಲಂಬನೆಗಾಗಿ ತರಬೇತಿಯನ್ನು ಆಯೋಜಿಸಲಾಗಿದ್ದು, 15 ರಿಂದ 29 ವರ್ಷ ವಯೋಮಿತಿಯುಳ್ಳ ಅಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ದ್ವಿತೀಯ ಪಿ.ಯು.ಸಿ ಉತ್ತೀರ್ಣರಾದವರಿಗೆ ಜ.24 ರಿಂದ ಫೆ.07 ರವರೆಗೆ 15 ದಿನಗಳ ಜಿಮ್/ಫಿಟ್ನೆಸ್ ತರಬೇತಿಯನ್ನು ವಿದ್ಯಾನಗರದ ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ, ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ.
ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆದವರಿಗೆ ಜ.26 ರಿಂದ ಫೆ. 07 ರವರೆಗೆ 13 ದಿನಗಳ ಬ್ಯೂಟಿಷಿಯನ್ ತರಬೇತಿ ಹಾಗೂ ದ್ವಿತೀಯ ಪಿ.ಯು.ಸಿ. ಪಾಸಾದವರಿಗೆ ಜ. 27 ರಿಂದ ಫೆ.07ರವರೆಗೆ 12 ದಿನಗಳ ವಿಡಿಯೋಗ್ರಾಫಿ ತರಬೇತಿಯನ್ನು ಬೆಂಗಳೂರು ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಪದವಿ ಹಾಗೂ ಜರ್ನಲಿಸಂ ಅಭ್ಯರ್ಥಿಗಳಿಗೆ ಜ. 31 ರಿಂದ ಫೆ.07 ರವರೆಗೆ 08 ದಿನಗಳ ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿಯನ್ನು ಬೆಂಗಳೂರು ಯುವನಿಕಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಯಾ ತರಬೇತಿಗೆ ನಿಗದಿಪಡಿಸಿದ ವಿದ್ಯಾಭ್ಯಾಸದ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ ಪ್ರತಿ ಗಳನ್ನು ಲಗತ್ತಿಸಿ ಜ. 20 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.